ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ (Challenging Star Darshan) ಹಾಗೂ ಗ್ಯಾಂಗ್ ಜೈಲು ಸೇರಿದೆ. ಇದೀಗ ದರ್ಶನ್ ಕುಟುಂಬಸ್ಥರು ಹಾಗೂ ಆಪ್ತರು ನಟನ ಬಳಿ ಮಾತನಾಡಲು ಬರುತ್ತಿದ್ದಾರೆ.
- Advertisement -
ಇಂದು ನಟ ವಿನೋದ್ ಪ್ರಭಾಕರ್ (Vinod Prabhakar) ಅವರು ದರ್ಶನ್ ಅವರನ್ನು ಭೇಟಿ ಮಾಡಲು ಪರಪ್ಪನ ಅಗ್ರಹಾರದ ಬಳಿ ಬಂದಿದ್ದಾರೆ. ಸ್ನೇಹಿತರ ಜೊತೆ ಚೆಕ್ ಪೋಸ್ಟ್ ಮೂಲಕ ಜೈಲಿನತ್ತ ಹೋಗಿದ್ದಾರೆ. ಇದನ್ನೂ ಓದಿ: ಸೊಳ್ಳೆಗಳ ಕಾಟ- ಐಷಾರಾಮಿ ಜೀವನ ನಡೆಸಿದ್ದ ಪವಿತ್ರಾಗೆ ನರಕವಾದ ಜೈಲುವಾಸ
- Advertisement -
- Advertisement -
ಇದಕ್ಕೂ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಭೇಟಿಗೆ ಅವಕಾಶ ಕೇಳಿದ್ದೆ, ಒಳಗೆ ಬಿಟ್ರೆ ಭೇಟಿ ಆಗುತ್ತೇನೆ. ಕುಟುಂಬದವರಿಗೆ ಮಾತ್ರ ಅವಕಾಶ ಅಂತ ಹೇಳಿದ್ದಾರೆ. ನೊಡೋಣ ಒಳಗಡೆ ಹೋಗಿ ಅಧಿಕಾರಿಗಳಿಗೆ ಕೇಳಿ ಭೇಟಿ ಆಗ್ತೇನೆ ಎಂದರು. ಅಂತೆಯೇ ಇದೀಗ ದರ್ಶನ್ ರನ್ನು ಭೇಟಿ ಮಾಡಿ ವಿನೋದ್ ಪ್ರಭಾಕರ್ ತಮ್ಮ ಕಾರಿನಲ್ಲಿ ಹೊರಟರು. ಇದನ್ನೂ ಓದಿ: ಊಟ ಸೇರ್ತಿಲ್ಲ, ನಿದ್ದೆ ಬರ್ತಿಲ್ಲ- ಜೈಲಿನಲ್ಲಿ ‘ಯಜಮಾನ’ ಪರದಾಟ
- Advertisement -
ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ ಎಂದು ಆರೋಪಿಸಿ ದರ್ಶನ್ ಹಾಗೂ ಗ್ಯಾಂಗ್ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತಂದಿದೆ. ನಂತರ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ಚಿತ್ರಹಿಂಸೆ ಕೊಟ್ಟು ಬರ್ಬರವಾಗಿ ಕೊಲೆ ಮಾಡಿದೆ. ಹತ್ಯೆಯ ಬಳಿಕ ರೇಣುಕಾಸ್ವಾಮಿ ಮೃತದೇಹವನ್ನು ಸುಮ್ಮನಹಳ್ಳಿ ಮೋರಿ ಬಳಿ ಬಿಸಾಕಿದೆ.
ಇತ್ತ ಮೋರಿ ಬಳಿ ಶವ ಸಿಗುತ್ತಿದ್ದಂತೆಯೇ ನಾಲ್ವರು ಪೊಲೀಸರಿಗೆ ಶರಣಾಗಿ ನಾವೇ ಕೊಲೆ ಮಾಡಿದ್ದಾಗಿ ಶರಣಾಗಿದ್ದಾರೆ. ಈ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ನಡೆದ ನಿಜ ಘಟನೆ ಬೆಳಕಿಗೆ ಬಂದಿದೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್, ಗೆಳತಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 14 ಮಂದಿಯನ್ನು ಜೈಲಿಗಟ್ಟಲಾಗಿದೆ.