ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾದ `ವಿಕ್ರಮ್’ ನಟಿ ಸ್ವಾತಿಷ್ಟ ಕೃಷ್ಣನ್

Public TV
2 Min Read
vinay rajkumar

ದಾ ಹೊಸ ಬಗೆಯ ಕಥೆ, ಪಾತ್ರಗಳ ಮೂಲಕ ಗಮನ ಸೆಳೆಯುವ ವಿನಯ್ ರಾಜ್‌ಕುಮಾರ್ (Vinay Rajkumar) ಇದೀಗ ಭಿನ್ನವಾಗಿರುವ ಲವ್ ಸ್ಟೋರಿ ಮಾಡಲು ರೆಡಿಯಾಗಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ (Simple Suni) ಜೊತೆ ಕೈಜೋಡಿಸಿದ್ದಾರೆ.

FotoJet 7 5

ಇತ್ತೀಚೆಗಷ್ಟೇ `ಅಂದೊಂದಿತ್ತು ಕಾಲ’ ಎನ್ನುವ ಲವ್ ಸಬ್‌ಜೆಕ್ಟ್ ಅನ್ನು ನಟ ವಿನಯ್ ಘೋಷಿಸಿದ್ದರು. ಈ ಬೆನ್ನಲ್ಲೇ ಮತ್ತೊಂದು ಪ್ರೇಮಕಥೆ ಒಳಗೊಂಡ ಸಿನಿಮಾ ಮಾಡಲು ಮುಂದಾಗಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಜೊತೆ ಕೈಗೊಡಿಸಿದ್ದಾರೆ. ಈ ಸಿನಿಮಾದ ಮುಹೂರ್ತ ಕೂಡ (ಜ.23)ರಂದು ನೆರವೇರಿದೆ. ಈ ವೇಳೆ ಚಿತ್ರತಂಡದ ಜೊತೆ ರಾಘವೇಂದ್ರ ರಾಜ್‌ಕುಮಾರ್‌ ಕುಟುಂಬ ಕೂಡ ಭಾಗಿಯಾಗಿದ್ದರು. ಇದನ್ನೂ ಓದಿ: ಜನವರಿ 27ಕ್ಕೆ ಮಂಸೋರೆ ನಿರ್ದೇಶನದ ‘19.20.21’ ಚಿತ್ರದ ಟ್ರೈಲರ್ ಬಿಡುಗಡೆ

simple suni

ಸಿಂಪಲ್ ಸುನಿ ನಿರ್ದೇಶನದ ಚಿತ್ರಕ್ಕೆ `ಒಂದು ಸರಳ ಪ್ರೇಮಕಥೆ’ (Ondu Sarala Prema Kathe) ಎಂದು ಟೈಟಲ್ ಇಡಲಾಗಿದೆ. 2013ರಲ್ಲಿ `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಎಂಬ ಚಿತ್ರವನ್ನು ನಿರ್ದೇಶಿಸಿ ಬೃಹತ್ ಗೆಲುವು ಸಾಧಿಸಿ ನೆಲೆಯೂರಿದ ನಿರ್ದೇಶಕ ಸುನಿ ಈ ಬಾರಿ ಅದೇ ಶೀರ್ಷಿಕೆ ಕನ್ನಡ ವರ್ಷನ್ ಅನ್ನು ಶೀರ್ಷಿಕೆಯಾಗಿ ಬಳಸಿದಂತಿದೆ.

vinay rajkumar

`ಸಿಂಪಲ್ಲಾಗ್ ಒಂದ ಲವ್ ಸ್ಟೋರಿ’ ಹಾಗೂ ಈಗಿನ `ಒಂದು ಸರಳ ಪ್ರೇಮ ಕಥೆ’ ಎರಡೂ ಶೀರ್ಷಿಕೆಗಳು ಒಂದೇ ಅರ್ಥವನ್ನು ನೀಡಲಿವೆ. ಈ ಹೊಸ ಕಥೆ ಯಾವ ರೀತಿ ಮೋಡಿ ಮಾಡಲಿದೆ ಎಂದು ಕಾದುನೋಡಬೇಕಿದೆ.

ಇನ್ನೂ ವಿನಯ್ ರಾಜ್‌ಕುಮಾರ್ ಜೊತೆ ಸ್ವಾತಿಷ್ಟ ಕೃಷ್ಣನ್ (Swathishta Krishnan) ನಾಯಕಿಯಾಗಿ ಮಿಂಚಲಿದ್ದಾರೆ. ಕಮಲ್ ಹಾಸನ್ (Kamal Haasan) ನಟನೆಯ `ವಿಕ್ರಮ್’ (Vikram) ಸಿನಿಮಾದಲ್ಲಿ ಸ್ವಾತಿಷ್ಟ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ `ಒಂದು ಸರಳ ಪ್ರೇಮ ಕಥೆ’ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಇನ್ನೂ ಸ್ವಾತಿಷ್ಟ ಕೂಡ ಕನ್ನಡದವರೇ ಆಗಿದ್ದು, ಮೂಲತಃ ಬೆಂಗಳೂರಿನವರಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *