ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ಹಾಗೂ ತಮನ್ನಾ ಭಾಟಿಯಾ (Tamannaah Bhatia) ನಡುವೆ ಬ್ರೇಕಪ್ ಆಗಿರೋದ್ಯಾಕೆ ಎಂಬುದಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈ ಬೆನ್ನಲ್ಲೇ ಸಂಬಂಧವನ್ನು ಐಸ್‌ಕ್ರೀಮ್‌ನಂತೆ ಆಸ್ವಾದಿಸಬೇಕು ಎಂದು ವಿಜಯ್ ವರ್ಮಾ ಹೇಳಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಕಿಶೋರ್‌ಗೆ ‘ಆಚಾರ್ & ಕೋ’ ನಿರ್ದೇಶಕಿ ಆ್ಯಕ್ಷನ್ ಕಟ್
ಸಂದರ್ಶನವೊಂದರಲ್ಲಿ ಮಾತನಾಡಿದ ವಿಜಯ್ ವರ್ಮಾ ಅವರು ಸಂಬಂಧವನ್ನು ಐಸ್‌ಕ್ರೀಮ್‌ಗೆ ಹೋಲಿಸಿದ್ದಾರೆ. ನೀವು ಐಸ್‌ಕ್ರೀಮ್ ತಿನ್ನುವಂತೆ ಸಂಬಂಧಗಳನ್ನು ಆನಂದಿಸಿದರೆ, ನೀವು ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಪಡೆಯುವ ಐಸ್ ಕ್ರೀಮ್‌ನ ತಿಂದು ಮುಂದುವರಿಯಬೇಕು ಎಂದಿದ್ದಾರೆ. ತಮನ್ನಾಗೆ ಪರೋಕ್ಷವಾಗಿ ವಿಜಯ್ ಹೇಳಿದ್ರಾ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಇದನ್ನೂ ಓದಿ: ಶ್ರೀಲೀಲಾಗೆ ಗೇಟ್ ಪಾಸ್- ರವೀನಾ ಟಂಡನ್ ಪುತ್ರಿಗೆ ಚಾನ್ಸ್
ಇತ್ತೀಚೆಗೆ ವಿಜಯ್ ಹಾಗೂ ತಮನ್ನಾ ಬ್ರೇಕಪ್ ಮಾಡಿಕೊಂಡಿದ್ದಾರೆ. ಇದುವರೆಗೂ ಇಬ್ಬರೂ ಬ್ರೇಕಪ್ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ. ಬ್ರೇಕಪ್‌ಗೆ ಕಾರಣವೇನು ಎಂಬುದನ್ನು ತಿಳಿಸಿಲ್ಲ. ಮುಂದಿನ ದಿನಗಳಲ್ಲಿ ಬ್ರೇಕಪ್ ಬಗ್ಗೆ ಅಸಲಿ ಕಾರಣ ಬಿಚ್ಚಿಡುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.
ಅಂದಹಾಗೆ, ವಿಜಯ್ ವರ್ಮಾ ಹಾಗೂ ತಮನ್ನಾ ಪ್ರಸ್ತುತ ಬೇರೆ ಬೇರೇ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ತಮನ್ನಾ ನಟನೆಯ ‘ಒಡೆಲಾ 2’ ಚಿತ್ರವು ಇದೇ ಏ.17ರಂದು ರಿಲೀಸ್ ಆಗಲಿದೆ.