ನಟಿ ತಮನ್ನಾ- ವಿಜಯ್ ವರ್ಮಾ (Vijay Varma) ಡೇಟಿಂಗ್ ಸುದ್ದಿಯೇನು ಈಗ ಗುಟ್ಟಾಗಿ ಉಳಿದಿಲ್ಲ. ಇಬ್ಬರು ಕೂಡ ಇತ್ತೀಚಿಗೆ ಎಂಗೇಜ್ ಆಗಿರೋದಾಗಿ ರಿವೀಲ್ ಮಾಡಿದ್ದರು. ಹೀಗಿರುವಾಗ ಈ ಜೋಡಿ ಇತ್ತೀಚಿಗೆ ಮಾಲ್ಡೀವ್ಸ್‌ಗೆ ಹೋಗಿದ್ದರು. ಈಗ ತಮ್ಮ ಊರಿಗೆ ವಾಪಸ್ ಆಗಿದ್ದಾರೆ. ಮಾಲ್ಡೀವ್ಸ್ನಲ್ಲಿ ತಮನ್ನಾ (Tamannaah Bhatia) ಮೋಜು- ಮಸ್ತಿ (Enjoy) ಮಾಡಿದ್ರಾ? ಎಂದು ಕೇಳಿದ್ದಕ್ಕೆ ನಟ ವಿಜಯ್ ಕಿಡಿಕಾರಿದ್ದಾರೆ. ಇದನ್ನೂ ಓದಿ:‘ಅನಾವರಣ’ ಚಿತ್ರದ ಮೊದಲ ಹಾಡು ರಿಲೀಸ್: ಅರ್ಜುನ್ ಯೋಗಿ ಸಿನಿಮಾ
ಬಾಲಿವುಡ್‌ನಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ಜೋಡಿ ಅಂದರೆ ವಿಜಯ್- ತಮನ್ನಾ ಭಾಟಿಯಾ. ಸದಾ ಒಂದಲ್ಲಾ ಒಂದು ವಿಚಾರವಾಗಿ ಈ ಜೋಡಿ ಸುದ್ದಿಯಲ್ಲಿರುತ್ತಾರೆ. ಇಬ್ಬರು ಜೊತೆಯಾಗಿ ಮಾಲ್ಡೀವ್ಸ್‌ಗೆ (Maldives) ಹಾರಿದ್ದರು. ಮಾಲ್ಡೀವ್ಸ್‌ನ ಸುಂದರ ಫೋಟೋಗಳನ್ನ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈಗ ಟ್ರಿಪ್ ಮುಗಿಸಿ ಮುಂಬೈಗೆ ಬಂದಿಳಿದಿದ್ದಾರೆ.
View this post on Instagram
ಆಗ ವಿಜಯ್ ವರ್ಮಾಗೆ, ಪಾಪರಾಜಿಗಳು ಟ್ರಿಪ್ ಹೇಗಿತ್ತು ಸರ್ ಎಂದು ಕೇಳಿದ್ದಾರೆ. ಚೆನ್ನಾಗಿತ್ತು ಎಂದು ಕೂಲ್ ಆಗಿ ಉತ್ತರಿದ್ದಾರೆ. ಬಳಿಕ ಮಾಲ್ಡೀವ್ಸ್‌ನಲ್ಲಿ ತಮನ್ನಾ ಜೊತೆ ಎಂಜಾಯ್ ಮಾಡಿದ್ರಾ? ಎಂದು ಕೇಳಿದ್ದಾರೆ. ಈ ಪ್ರಶ್ನೆ ಕೇಳ್ತಿದ್ದಂತೆ ನಟ ಸಿಟ್ಟಾಗಿದ್ದಾರೆ. ಈ ರೀತಿ ನೀವು ಮಾತನಾಡುವಂತಿಲ್ಲ ಎಂದು ಹೇಳಿದ್ದಾರೆ. ವಿಜಯ್ ವರ್ಮಾ ಪಾಪರಾಜಿಗಳ ವಿರುದ್ಧ ಗರಂ ಆಗಿದ್ದಾರೆ.
ನಟಿ ತಮನ್ನಾ, ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಆದರೆ ಅವರು ಯಾರ ಜೊತೆನೂ ಮಾತನಾಡದೇ ಕಾರು ಹತ್ತಿ ತೆರಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.