ಬೆಂಗಳೂರು: ಇತ್ತೀಚೆಗೆ ಕಿರುತೆರೆ ಮತ್ತು ಬೆಳ್ಳೆತೆರೆ ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗ ನಟ ಹಾಗೂ ಕಿರುತೆರೆಯ ಹ್ಯಾಂಡ್‍ಸಮ್ ಹುಡುಗ ವಿಜಯ್ ಸೂರ್ಯ ಸದ್ಯದಲ್ಲೇ ಮದುವೆಯಾಗಲಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಅಗ್ನಿಸಾಕ್ಷಿ’ ಧಾರಾವಾಹಿಯ ಮೂಲಕವೇ ನಟ ವಿಜಯ್ ಸೂರ್ಯ ಅವರು ಜನಪ್ರಿಯತೆ ಗಳಿಸಿದ್ದಾರೆ. ಇದೇ ತಿಂಗಳು ಅಂದರೆ ಫೆಬ್ರವರಿ 14 ರಂದು ಅದು ಪ್ರೇಮಿಗಳ ದಿನದಂತೆ ವಿವಾಹವಾಗುತ್ತಿದ್ದಾರೆ. ಚೈತ್ರಾ ಎಂಬವರನ್ನು ವಿಜಯ್ ಸೂರ್ಯ ಮದುವೆಯಾಗುತ್ತಿದ್ದಾರೆ. ಚೈತ್ರಾ ಅವರ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದು, ವಿಜಯ್ ಸೂರ್ಯ ಅವರ ದೂರದ ಸಂಬಂಧಿಯಾಗಿದ್ದಾರೆ.
ತಮ್ಮ ಮದುವೆ ಎಂದು ಸುದ್ದಿ ಹರಿದಾಡುತ್ತಿದ್ದಂತೆ ಈ ಬಗ್ಗೆ ವಿಜಯ್ ಸೂರ್ಯ ಸ್ಪಷ್ಟಪಡಿಸಿದ್ದಾರೆ. ಚೈತ್ರಾ ಮತ್ತು ನಮ್ಮ ಕುಟುಂಬದವರಿಗೆ 9 ವರ್ಷಗಳ ಹಿಂದೆ ಪರಿಚಯವಾಗಿದೆ. ಆದರೆ ನಾನು ಚೈತ್ರಾರನ್ನು ಎರಡು ಬಾರಿ ಮಾತ್ರ ಭೇಟಿ ಮಾಡಿದ್ದೇನೆ. ನಮ್ಮ ತಾಯಿ ಅವರನ್ನು ನೋಡಿ ಇಷ್ಟಪಟ್ಟು ಮದುವೆಯ ಬಗ್ಗೆ ಅವರ ಕುಟುಂಬದವರ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಬಳಿಕ ಅವರು ಒಪ್ಪಿಗೆ ಸೂಚಿಸಿದ್ದು, ಇಬ್ಬರ ಜಾತಕ ಹೊಂದಾಣಿಕೆಯಾಗಿದ್ದು, ಗುರು-ಹಿರಿಯರು ಈಗ ನಮ್ಮ ಮದುವೆಯನ್ನು ನಿಶ್ಚಯಿಸಿದ್ದಾರೆ ಎಂದು ವಿಜಯ್ ಹೇಳಿದ್ದಾರೆ.
23 ವರ್ಷದ ಚೈತ್ರಾ ಅವರು ಪ್ರಬುಧ್ಧವಾಗಿ ಯೋಚಿಸುತ್ತಾರೆ. ನಾನು ನಮ್ಮ ಉದ್ಯೋಗ ಎಲ್ಲರ ಗಮನವನ್ನು ಸೆಳೆಯುತ್ತದೆ ಎಂದುಕೊಂಡಿದ್ದೆ. ಆದರೆ ಚೈತ್ರಾ ನಾನೊಬ್ಬ ನಟ ಎಂದು ಅಷ್ಟಾಗಿ ಚಿಂತಿಸಲಿಲ್ಲ. ‘ವ್ಯಕ್ತಿ ಯಾರು ಎನ್ನುವುದಕ್ಕಿಂತ ವ್ಯಕ್ತಿ ಹೇಗೆ’ ಎಂದು ಚೈತ್ರಾ ನೋಡುತ್ತಾರೆ. ನನ್ನ ನಟನಾ ಫೀಲ್ಡ್, ಅಲ್ಲಿನ ಸುದ್ದಿ, ಗಾಸಿಪ್ ಗಳ ಬಗ್ಗೆ ಮುಂಚಿತವಾಗಿ ನಾನು ಅವರೊಂದಿಗೆ ಮಾತನಾಡಿದ್ದೇನೆ. ಬೇರೆ ವೃತ್ತಿಯಂತೆ ನಟನೆಯು ಒಂದು ವೃತ್ತಿ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ. ಆದ್ದರಿಂದ ಅವರು ನನಗೆ ಇಷ್ಟವಾದರು ಎಂದು ವಿಜಯ್ ಸೂರ್ಯ ತಮ್ಮ ಭಾವಿ ಪತ್ನಿ ಚೈತ್ರಾ ಬಗ್ಗೆ ಮಾತನಾಡಿದ್ದಾರೆ.
ನಮ್ಮ ಮದುವೆ ಕುಟುಂಬ, ಸ್ನೇಹಿತರ ಸಮ್ಮುಖದಲ್ಲಿ ನಡೆಯಲಿದೆ. ನಮ್ಮ ಮದುವೆ ದಿನಾಂಕವೂ ಒಂದು ವಿಶೇಷ ದಿನ ಎಂದು ಭಾವಿಸುವುದಿಲ್ಲ. ಆದರೆ ನನ್ನ ಮದುವೆ ದಿನವನ್ನು ನಾನು ಮರೆಯುದಿಲ್ಲ ಎಂದು ವಿಜಯ್ ಸೂರ್ಯ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv