ವಿಜಯ್ ಸೇತುಪತಿ (Vijay Sethupathi) ನಟನೆಯ ‘ಮಹಾರಾಜ’ (Maharaja) ಚಿತ್ರ ಕಳೆದ ವರ್ಷ ಸಕ್ಸಸ್ ಕಂಡಿತ್ತು. ಕಳೆದು ಹೋದ ಕಸದ ಡಬ್ಬಿಯನ್ನು ಹುಡುಕುವ ನಾಯಕನ ಕಥೆಯನ್ನು ನಿರ್ದೇಶಕರು ಇಂಟ್ರೆಸ್ಟಿಂಗ್ ಆಗಿ ಹೇಳಿದ್ದರು. ಈಗ ಅದರದ್ದೇ ಸೀಕ್ವೆಲ್ ಕಥೆ ಹೇಳಲು ಪ್ಲ್ಯಾನ್ ಮಾಡಿದ್ದಾರೆ. ಈ ಮೂಲಕ ವಿಜಯ್ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ:ಯುದ್ಧವು ದೇಶದ ಖ್ಯಾತಿಗೆ ಒಳ್ಳೆಯದಲ್ಲ: ‘ಆಪರೇಷನ್ ಸಿಂಧೂರ’ ಬಗ್ಗೆ ಸಂಜನಾ ಗಲ್ರಾನಿ ಪೋಸ್ಟ್
‘ಮಹಾರಾಜ’ ಸಿನಿಮಾವನ್ನು ನಿತಿಲನ್ ಸಾಮಿನಾಥನ್ ಅದ್ಭುತವಾಗಿ ಬೆಳ್ಳಿಪರದೆಯಲ್ಲಿ ತೋರಿಸಿದ್ದರು. ಈ ಚಿತ್ರ ಸಕ್ಸಸ್ ಕಂಡಿರೋ ಹಿನ್ನೆಲೆ ಇದರ ಸೀಕ್ವೆಲ್‌ಗೆ ಸಿದ್ಧತೆ ನಡೆಯುತ್ತಿದೆ. ‘ಮಹಾರಾಜ’ ಸೀಕ್ವೆಲ್ ಬರಲಿದೆ ಎಂದು ಸುದ್ದಿ ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ‘ಮಹಾರಾಜ’ ಪಾರ್ಟ್ 2ನಲ್ಲಿ ಡಿಫರೆಂಟ್ ಕಥೆ ಹೇಳೋಕೆ ಅವರು ಸಜ್ಜಾಗಿದ್ದಾರೆ. ಇದನ್ನೂ ಓದಿ:ಆಪರೇಷನ್ ಸಿಂಧೂರ: ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸುವ ನಮ್ಮ ಸೈನಿಕರಿಗೆ ಥ್ಯಾಂಕ್ಯೂ ಎಂದ ರಶ್ಮಿಕಾ ಮಂದಣ್ಣ
ಈ ಸಿನಿಮಾದ ಕೆಲಸ ಈಗಾಗಲೇ ಆರಂಭವಾಗಿದೆ. ಈ ಬಾರಿ ಕತೆ ಮತ್ತು ಪಾತ್ರಗಳು ವಿಭಿನ್ನವಾಗಿರಲಿದೆ. ಈ ಸಿನಿಮಾಗೂ ನಿತಿಲನ್ ಸಾಮಿನಾಥನ್ ಅವರೇ ಆ್ಯಕ್ಷನ್ ಹೇಳಲಿದ್ದಾರೆ. ಈ ಸಿನಿಮಾಗೆ ನಟನಾಗಿ ಮಾತ್ರವಲ್ಲ ಸಹ ನಿರ್ಮಾಪಕನಾಗಿ ವಿಜಯ್ ಸೇತುಪತಿ ಸಾಥ್ ನೀಡಲಿದ್ದಾರೆ. ಮತ್ತೊಂದು ಇಂಟ್ರೆಸ್ಟಿಂಗ್ ಅಪ್‌ಡೇಟ್ ಏನೆಂದರೆ ವಿಜಯ್ ಎದುರು ಫಹಾದ್ ಫಾಸಿಲ್ ನಟಿಸಲಿದ್ದಾರೆ ಎನ್ನಲಾಗಿದೆ.
2024ರಲ್ಲಿ ತೆರೆಕಂಡ ‘ಮಹಾರಾಜ’ ಸಿನಿಮಾದಲ್ಲಿ ವಿಜಯ್ ಸೇತುಪತಿ, ಬಾಲಿವುಡ್ ನಟ ಅನುರಾಗ್ ಕಶ್ಯಪ್, ಅಭಿರಾಮಿ, ದಿವ್ಯಾ ಭಾರತಿ, ಮಮತಾ ಮೋಹನ್ ದಾಸ್ ಸೇರಿದಂತೆ ಅನೇಕರು ನಟಿಸಿದ್ದರು.