ವಿಜಯ್ ಸೇತುಪತಿ, ತ್ರಿಷಾ (Trisha Krishnan) ನಟನೆಯ ’96’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ’96’ ಸಿನಿಮಾದ ಸೀಕ್ವೆಲ್ ಮಾಡೋದಾಗಿ ಚಿತ್ರದ ನಿರ್ದೇಶಕ ಪ್ರೇಮ್ ಕುಮಾರ್ ಘೋಷಿಸಿದ್ದಾರೆ. ಇದನ್ನೂ ಓದಿ:ನಾಗಶೇಖರ್ ಚಿತ್ರಕ್ಕೆ ಬಾಲಿವುಡ್ ನಟಿ ಆವಂತಿಕಾ ದಸ್ಸಾನಿ ನಾಯಕಿ
2018ರಲ್ಲಿ ತೆರೆಕಂಡ ’96’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದ ಪಾರ್ಟ್ 2 ಬಂದರೆ ಚೆನ್ನಾಗಿರುತ್ತದೆ ಎಂದು ಅದೆಷ್ಟೋ ಅಭಿಮಾನಿಗಳು ಎದುರು ನೋಡುತ್ತಿದ್ದರು. 6 ವರ್ಷಗಳ ಬಳಿಕ ಸೀಕ್ವೆಲ್ ಮಾಡಲು ನಿರ್ದೇಶಕ ಪ್ರೇಮ್ ತಯಾರಿ ಮಾಡಿಕೊಳ್ತಿದ್ದಾರೆ. 96 ಚಿತ್ರದ ಕ್ರೇಜ್ ನೋಡಿ ಮೊದಲ ಭಾಗದ ಕಥೆಯನ್ನೇ ಮುಂದುವರೆಸಲು ಡೈರೆಕ್ಟರ್ ಪ್ರೇಮ್ ನಿರ್ಧರಿಸಿದ್ದಾರೆ.
ಸದ್ಯ ಸ್ಕ್ರೀಪ್ಟ್ ಕೂಡ ಸಿದ್ಧವಾಗಿದೆ. ವಿಭಿನ್ನವಾಗಿರೋ ಕಥೆಯನ್ನೇ ತೋರಿಸಲು ಸಜ್ಜಾಗಿದ್ದಾರೆ. ಇನ್ನೂ ಪಾರ್ಟ್ 2ನಲ್ಲಿಯೂ ನಟಿಸಲು ವಿಜಯ್ ಸೇತುಪತಿ ಮತ್ತು ತ್ರಿಷಾ ಕೇಳಲಿದ್ದಾರಂತೆ. ಅವರು ಓಕೆ ಎಂದರೆ ಶೀಘ್ರದಲ್ಲಿ ಸಿನಿಮಾ ಸೆಟ್ಟೇರಲಿದೆ.ಆದರೆ ಈ ಜೋಡಿ ಮತ್ತೆ ಜೊತೆಯಾಗಿ ನಟಿಸಲು ಒಪ್ಪಿಕೊಳ್ತಾರಾ ಎಂಬುದನ್ನು ಕಾದುನೋಡಬೇಕಿದೆ.
’96’ ಸಿನಿಮಾದಲ್ಲಿ ಮಾಜಿ ಪ್ರೇಮಿಗಳು ಹಲವು ವರ್ಷಗಳ ನಂತರ ಭೇಟಿಯಾದ ನಂತರ ಅವರ ನಡುವೆ ನಡೆಯುವ ಎಮೋಷನಲ್ ಸಂಗತಿಯನ್ನು ತೋರಿಸಿದ್ದರು. ವಿಜಯ್ ಸೇತುಪತಿ (Vijay Sethupathi) ಮತ್ತು ತ್ರಿಷಾ ಮಾಜಿ ಪ್ರೇಮಿಗಳು ಪಾತ್ರಕ್ಕೆ ಜೀವತುಂಬಿದ್ದರು.