ಪತ್ನಿ ನೆನೆದು ಮತ್ತೆ ಭಾವುಕ ಸಾಲುಗಳ ಬರೆದ ನಟ ವಿಜಯ್ ರಾಘವೇಂದ್ರ

Public TV
2 Min Read
spandana vijay raghavendra 15

ಟ ವಿಜಯ್ ರಾಘವೇಂದ್ರ ಅವರು ಅಗಲಿದ ಪತ್ನಿ ಸ್ಪಂದನಾ (Spandana) ಅವರನ್ನು ನೆನಪಿಸಿಕೊಂಡು ಮತ್ತೆ ಭಾವುಕ ಸಾಲುಗಳನ್ನು ಬರೆದಿದ್ದಾರೆ. ‘ಮಾಸಗಳು ಕಳೆದರೂ ಮಾಸದ ಹೃದಯದೊಳಗಿನ ಈ ಮಂದಹಾಸ… ಐ ಲವ್ ಯೂ ಚಿನ್ನಾ’ ಎಂದು ಭಾವುಕ ಸಾಲುಗಳನ್ನು ಬರೆದು, ಹೆಂಡತಿ ಜೊತೆಗಿನ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.

spandana vijay raghavendra 8

ಈ ಹಿಂದೆಯೂ ವಿಜಯ ರಾಘವೇಂದ್ರ (Vijaya Raghavendra) ತಮ್ಮ 16ನೇ ವಿವಾಹ ವಾರ್ಷಿಕೋತ್ಸವ (Wedding Anniversary)ದ ಸಂದರ್ಭದಲ್ಲಿ ಈ ರೀತಿಯ ಭಾವುಕ ಸಾಲುಗಳನ್ನು ಬರೆದಿದ್ದರು. ಪ್ರತಿ ವರ್ಷವೂ ಸಂಭ್ರಮದಿಂದ ಆ ದಿನವನ್ನು ಬರಮಾಡಿಕೊಳ್ಳುತ್ತಿದ್ದವರು,  ಸ್ಪಂದನಾ ಹೃದಯಾಘಾತದಿಂದ ನಿಧನರಾಗಿ, ವಿಜಯ್ ಅವರ ಎದೆಯಲ್ಲಿ ಆರದ ಗಾಯ ಮಾಡಿ ಹೋಗಿದ್ದಾರೆ. ಅಗಲಿದ ಪತ್ನಿಗೆ ವಿಜಯ ರಾಘವೇಂದ್ರ ಭಾವುಕ ಸಾಲುಗಳ ಮೂಲಕ ವಿಶ್ ಮಾಡಿದ್ದರು. ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಆಗಸ್ಟ್ 26ರಂದು 2017ರಲ್ಲಿ ವಿಜಯ-ಸ್ಪಂದನಾ ಮದುವೆಯಾದವರು. ಅವರ ದಾಂಪತ್ಯಕ್ಕೆ ಪ್ರೀತಿಗೆ ಶೌರ್ಯ ಎಂಬ ಪುತ್ರ ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ:ಟ್ರೈಲರ್ ಮೂಲಕ ಕಿಚ್ಚು ಹಚ್ಚಿದ `ಇನಾಮ್ದಾರ್’ ಸಿನಿಮಾ

spandana vijay raghavendra 1 1

ಭಾವುಕ ಸಾಲುಗಳನ್ನು ಬರೆದು, ಅದಕ್ಕೆ ವಿಡಿಯೋ ಸ್ಪರ್ಶ ಕೂಡ ನೀಡಿರುವ ವಿಜಯ ರಾಘವೇಂದ್ರ “ಚಿನ್ನ, ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ.. ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ.. ಬದುಕನ್ನು ಕಟ್ಟಿ ಸರ್ವಸ್ವವಾದೆ.. ಉಸಿರಲ್ಲಿ ಬೆರೆತು ಜೀವಂತವಾದೆ.. ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು.. ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ..” ಎಂದು ಬರೆದುಕೊಂಡಿದ್ದರು.

spandana vijay raghavendra 10

ಪತ್ನಿಯ ನಿಧನದಿಂದ ಮೌನಕ್ಕೆ ಶರಣಾಗಿದ್ದ ವಿಜಯ್ ಆನಂತರ ಸ್ಪಂದನಾ ಬಗ್ಗೆ ಭಾವುಕರಾಗಿ ವೀಡಿಯೋ ಮೂಲಕ ಮನದಾಳದ ಭಾವನೆಗಳನ್ನ ಅಕ್ಷರ ರೂಪಕ್ಕೆ ಇಳಿಸಿದ್ದರು. ಸ್ಪಂದನಾ ನೆನಪನ್ನ ತಮ್ಮೊಳಗಿನ ಪ್ರೀತಿಯನ್ನ ಅವರು ಬಿಚ್ಚಿಟ್ಟಿದ್ದರು. ಆ ಸಾಲುಗಳು ಕೂಡ ಅನೇಕರನ್ನು ಭಾವುಕರನ್ನಾಗಿಸಿದ್ದವು.

 

ಸ್ಪಂದನಾ ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ. ಕೇವಲ ನಿನ್ನವ ಎಂದು ವಿಜಯ ರಾಘವೇಂದ್ರ ಭಾವನ್ಮಾತಕವಾಗಿ ಸಾಲುಗಳನ್ನು ಬರೆದುಕೊಂಡಿದ್ದರು.

Web Stories

Share This Article