ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spadana) ಅವರು ನಿಧನರಾಗಿದ್ದಾರೆ. ಹೃದಯಾಘಾತದಿಂದ ಸ್ಪಂದನಾ ಇಹಲೋಕ ತ್ಯಜಿಸಿದ್ದಾರೆ.
ವಿಜಯ್ ಪತ್ನಿ ಸ್ಪಂದನಾ ಅವರು ಇತ್ತೀಚಿಗೆ ಬ್ಯಾಂಕಾಕ್ (Bankok) ಪ್ರವಾಸಕ್ಕೆ ತೆರಳಿದ್ದಾಗ ಹೃದಯಾಘಾತವಾಗಿದೆ. ಅಪ್ಪು ನಿಧನದ ಶಾಕ್‌ನಿಂದ ಹೊರ ಬಂದಾಗಲೇ ಮತ್ತೊಂದು ಆಘಾತಕಾರಿ ವಿಚಾರ ಕುಟುಂಬಕ್ಕೆ ಶಾಕ್ ನೀಡಿದೆ. ಲೋ ಬಿಪಿ ಮತ್ತು ಹೃದಯಾಘಾತದಿಂದ ವಿಜಯ್ ಪತ್ನಿ ಸ್ಪಂದನ ವಿಧಿವಶರಾಗಿದ್ದಾರೆ.
ನಾಳೆ ಬೆಂಗಳೂರಿಗೆ ವಿಜಯ್ ಪತ್ನಿ ಪಾರ್ಥಿವ ಶರೀರ ಬರುವ ಸಾಧ್ಯತೆಯಿದ್ದು, ವಿಧಿ ವಿಧಾನ ಕಾರ್ಯವೆಲ್ಲ ಬೆಂಗಳೂರಿನಲ್ಲಿ ಜರುಗಲಿದೆ. ನಿವೃತ್ತ ಅಸಿಸ್ಟೆಂಟ್ ಪೊಲೀಸ್ ಆಫೀಸರ್ ಬಿ.ಕೆ ಶಿವರಾಮ್ ಅವರ ಪುತ್ರಿ ಸ್ಪಂದನಾ ಅವರು ವಿಜಯ್ ಹಲವು ವರ್ಷಗಳಿಂದ ಪ್ರೀತಿಸಿ, 2007ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಈ ಜೋಡಿಗೆ ಓರ್ವ ಮಗನಿದ್ದಾನೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]