ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ (Vijay Raghavendra) ಮತ್ತು ಸ್ಪಂದನಾ (Spandana Vijay) ಇಂದು (ಆ.26) ದಾಂಪತ್ಯ ಜೀವನಕ್ಕೆ ಕಾಲಿಟ್ಟು 17 ವರ್ಷಗಳು ಕಳೆದಿವೆ. ಅಗಲಿದ ಪತ್ನಿಯನ್ನು ನೆನೆದು ಹ್ಯಾಪಿ ಆ್ಯನಿವರ್ಸರಿ ಚಿನ್ನ ಎಂದು ನಟ ಭಾವುಕವಾಗಿ ಇನ್ಸ್ಟಾಗ್ರಾಂನಲ್ಲಿ ನಟ ಬರೆದುಕೊಂಡಿದ್ದಾರೆ.
ಇಂದಿಗೆ 17 ವರ್ಷಗಳು. ಹ್ಯಾಪಿ ಆ್ಯನಿವರ್ಸರಿ ಚಿನ್ನ ಎಂದು ವಿಶ್ ಮಾಡಿ, ಸ್ಪಂದನಾ ಜೊತೆಗಿನ ಹಳೆಯ ಫೋಟೋವೊಂದನ್ನು ವಿಜಯ್ ರಾಘವೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಬಿ ಮೈ ಲೈಟ್ ಅಂತಲೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:‘ಫೈರ್ ಫ್ಲೈ’ ಶೂಟಿಂಗ್ ಮುಕ್ತಾಯ- ಮರೆಯಲಾಗದ ಪಯಣ ಎಂದ ನಿವೇದಿತಾ ಶಿವರಾಜ್‌ಕುಮಾರ್
View this post on Instagram
ಈ ಹಿಂದೆ ಪ್ರತಿ ವರ್ಷ ಸ್ಪಂದನಾ ಜೊತೆ ಮದುವೆ ವಾರ್ಷಿಕೋತ್ಸವನ್ನು ವಿಜಯ್ ವಿಶೇಷವಾಗಿ ಸೆಲೆಬ್ರೇಟ್ ಮಾಡುತ್ತಿದ್ದರು. ಆದರೆ ಈಗ ಸ್ಪಂದನಾ ಇಲ್ಲ ಅನ್ನೋ ನೋವು ಕೂಡ ಅವರಿಗದೆ. ಹಾಗಂತ ಪತ್ನಿಗೆ ವಿಶ್ ಮಾಡೋದನ್ನು ವಿಜಯ್ ಮರೆತಿಲ್ಲ.
ಅಂದಹಾಗೆ, ಆಗಸ್ಟ್ 6ರಂದು ಹೃದಯಾಘಾತದಿಂದ ಸ್ಪಂದನಾ ಬ್ಯಾಕಾಂಕ್‌ನಲ್ಲಿ ನಿಧನರಾದರು. ಆಗಸ್ಟ್ 9ರಂದು ಸ್ಪಂದನಾ ಅಂತ್ಯಕ್ರಿಯೆ ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿತ್ತು.