Connect with us

Cinema

ರಶ್ಮಿಕಾ ಕಾಲಿನ ಮೇಲೆ ತನ್ನ ಕಾಲು ಹಾಕಿದ ‘ಅಜ್ಜ’ ವಿಜಯ್ ದೇವರಕೊಂಡ

Published

on

ಹೈದರಾಬಾದ್: ಸ್ಯಾಂಡಲ್‍ವುಡ್ ಕ್ರಶ್ ಎಂದು ಕರೆಯಿಸಿಕೊಂಡಿದ್ದ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಒಂದಿಲ್ಲೊಂದು ವಿಚಾರ ಮೂಲಕ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ತನಗೆ ಕನ್ನಡ ಮಾತನಾಡಲು ಬರಲ್ಲ ಎಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ರಶ್ಮಿಕಾ ಸದ್ಯ ಮತ್ತೆ ಸಂದರ್ಶನವೊಂದರಲ್ಲಿ ನಡೆದುಕೊಂಡ ರೀತಿಯಿಂದ ಟ್ರೋಲ್ ಆಗಿದ್ದಾರೆ.

ನಟ ವಿಜಯ್ ದೇವರಕೊಂಡರೊಂದಿಗೆ ನಟಿಸಿದ್ದ ‘ಡಿಯರ್ ಕಾಮ್ರೇಡ್’ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರದ ಪ್ರಚಾರದಲ್ಲಿ ಇಬ್ಬರು ಬ್ಯುಸಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದ ವೇಳೆ ನಟ ವಿಜಯ್ ದೇವರಕೊಂಡ, ರಶ್ಮಿಕಾ ಅವರ ಕಾಲಿನ ಮೇಲೆ ಕಾಲು ಹಾಕಿರುವ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಚಿತ್ರದಲ್ಲಿ ನಟಿಸಿದ್ದ ಪಾತ್ರದ ಬಗ್ಗೆ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, ‘ಗೀತಾ’ ಪಾತ್ರದ ಬಳಿಕ ‘ಲಿಲ್ಲಿ’ ಪಾತ್ರದಲ್ಲಿ ನಟಿಸಿದ್ದು, ಸಿನಿಮಾ ಎಂದ ಮೇಲೆ ಎಲ್ಲಾ ಪಾತ್ರಗಳನ್ನು ಮಾಡಬೇಕಾಗುತ್ತದೆ. ಗೀತಾ, ಲಿಲ್ಲಿ ಪಾತ್ರದ ಬಳಿಕ ಇಂತಹ (ವಿಜಯ್ ದೇವರಕೊಂಡ) ತಾತನೊಂದಿಗೂ ನಟಿಸಬೇಕಿದೆ ಎಂದು ದೇವರಕೊಂಡ ಕಾಲೆಳೆದಿದ್ದರು. ರಶ್ಮಿಕಾ ಉತ್ತರದಿಂದ ಅಚ್ಚರಿಗೊಂಡ ದೇವರಕೊಂಡ, ನಾನು ತಾತನಾದರೆ ನನ್ನ ಕಾಲುಗಳನ್ನು ಒತ್ತು ಮೊಮ್ಮಗಳೇ ಎಂದು ತಮ್ಮ ಕಾಲನ್ನು ರಶ್ಮಿಕಾರ ಕಾಲಿನ ಮೇಲೆ ಇಟ್ಟಿದ್ದರು.

ನಾನು ನಮ್ಮ ತಾತ ಹಾಗೂ ಅಜ್ಜಿಗೆ ಪ್ರತಿದಿನ ಅವರ ಕಾಲುಗಳನ್ನು ಒತ್ತುತ್ತಿದ್ದೆ. ಈಗ ನನ್ನನ್ನು ತಾತ ಅಂದ್ಯಲ್ಲಾ, ನೀನು ನನ್ನ ಕಾಲು ಒತ್ತಬೇಕು ಎಂದು ದೇವರಕೊಂಡ ಕ್ರೇಜಿ ಪ್ರತಿಕ್ರಿಯೆ ನೀಡಿದ್ದರು. ಇದರಿಂದ ಕೋಪಗೊಳ್ಳದ ರಶ್ಮಿಕಾ ನಿಧಾನವಾಗಿ ದೇವರಕೊಂಡ ಕಾಲನ್ನು ಕೆಳಕ್ಕೆ ಇಳಿಸಿದ್ದರು. ಇತ್ತ ಇಬ್ಬರ ನಡೆಗೆ ದಂಗಾದ ಟಿವಿ ಆ್ಯಂಕರ್, ಸದ್ಯ ನಾವು ಇಬ್ಬರಿಗೂ 2 ಚೇರ್ ನೀಡಿ ಉತ್ತಮ ಕೆಲಸ ಮಾಡಿದ್ದೇವೆ. ಇಲ್ಲವಾದರೆ ನೀವು ಇನ್ನೇನು ಮಾಡುತ್ತಿದ್ದಿರೋ ಎಂದು ನಗು ಬೀರಿದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ದೇವರಕೊಂಡ ಅವರೊಂದಿಗೆ ಅಷ್ಟು ಸಲುಗೆ ಇಂದ ರಶ್ಮಿಕಾರನ್ನ ನಡೆಯನ್ನು ಕೆಲವರು ಟೀಕೆ ಮಾಡಿದ್ದಾರೆ. ಸಾರ್ವಜನಿಕ ಸಂದರ್ಶನವೊಂದರಲ್ಲಿ ನಟಿಯೊಂದಿಗೆ ದೇವರಕೊಂಡ ರೀತಿ ಉತ್ತಮವಲ್ಲ ಎಂದಿದ್ದಾರೆ. ಮತ್ತೆ ಕೆಲವರು ಇಬ್ಬರ ಜೋಡಿ ಉತ್ತಮವಾಗಿದೆ. ಸಿನಿಮಾ ಕೂಡ ಉತ್ತಮವಾಗಿದ್ದು, ಮುಂದಿನ ಸಿನಿಮಾಗಾಗಿ ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *