ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ‘ಚಾವಾ’ (Chhava) ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ಕಿ ಕೌಶಲ್ ಜೊತೆಗಿನ ಈ ಚಿತ್ರಕ್ಕಾಗಿ ನಟಿ ಮರಾಠಿ ಭಾಷೆಯನ್ನು ಕಲಿತಿದ್ದಾರೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಇದನ್ನೂ ಓದಿ:‘ಆರ್ಟಿಕಲ್ 370’ ಚಿತ್ರದ ನಟಿಯ ಪುತ್ರಿ ಮಿಹಿಕಾ ನಿಧನ
ಛತ್ರಪತಿ ಸಂಭಾಜಿ ಅವರ ಜೀವನ ಕಥೆ ಆಧರಿಸಿ ಸಿನಿಮಾ ಬರುತ್ತಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ನಟಿಸುತ್ತಿದ್ದಾರೆ. ಈ ಸಿನಿಮಾದ ಹಲವು ಸಂಭಾಷಣೆಗಳು ಮರಾಠಿ ಭಾಷೆಯಲ್ಲಿ ಇರಲಿದ್ದು, ಅದಕ್ಕಾಗಿ 4 ವಾರಗಳ ಕಾಲ ನಟಿ ಮರಾಠಿ ಕಲಿಯಲು ವಿಶೇಷ ತರಬೇತಿ ಕೂಡ ಪಡೆದಿದ್ದಾರೆ. ವಿಕ್ಕಿ ಕೌಶಲ್ (Vicky Kaushal) ಕೂಡ ಮರಾಠಿ ಭಾಷೆ ಕಲಿಕೆಯಲ್ಲಿ ನಿರತರಾಗಿದ್ದಾರೆ.
‘ಚಾವಾ’ ಸಿನಿಮಾದಲ್ಲಿನ ತನ್ನ ಪಾತ್ರಕ್ಕೆ ರಶ್ಮಿಕಾ ಅವರೇ ಧ್ವನಿ ನೀಡಲಿದ್ದಾರೆ. ಇನ್ನೂ ಮೊದಲ ಬಾರಿಗೆ ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ನಟಿಸುತ್ತಿರುವ ಕಾರಣ ಈ ಚಿತ್ರದ ಮೇಲೆ ಫ್ಯಾನ್ಸ್‌ಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಇದನ್ನೂ ಓದಿ:ಗೋವಾದಲ್ಲಿ ಕೊಡೆ ಹಿಡಿದು ನಿಂತ ‘ಬಿಗ್ ಬಾಸ್’ ಖ್ಯಾತಿಯ ಸೋನು
ಇನ್ನೂ ‘ಚಾವಾ’ ಸಿನಿಮಾವು ಡಿಸೆಂಬರ್ 6ರಂದು ‘ಪುಷ್ಪ 2’ ಮುಂದೆ ರಿಲೀಸ್ ಆಗಲಿದೆ. ಒಂದೇ ದಿನ ರಶ್ಮಿಕಾ ನಟನೆಯ ಎರಡು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ.