ನಟ ವಸಿಷ್ಠ ಸಿಂಹಗೆ ನಿರ್ದೇಶಕನಿಂದ ನಂಬಿಕೆ ದ್ರೋಹ

Public TV
1 Min Read
vasishta simha

ಮಗೆ ನಂಬಿಕೆ ದ್ರೋಹವಾಗಿದೆ. ಇನ್ಮುಂದೆ ಸಿನಿಮಾ ಒಪ್ಪಿಕೊಳ್ಳುವಾಗ ಅಗ್ರಿಮೆಂಟ್ ಕ್ಲಿಯರ್ ಆಗಿ ಮಾಡಿಕೊಳ್ಳಬೇಕು ಅನಿಸಿದೆ ಎಂದಿದ್ದಾರೆ ನಟ ವಸಿಷ್ಠ ಸಿಂಹ (Vasishtha Simha). ತಾವು ಇಷ್ಟಪಟ್ಟು ಮಾಡಿದ್ದ ಕಾಲಚಕ್ರ (Kalachakra) ಸಿನಿಮಾವನ್ನು ನಿರ್ದೇಶಕ ಸುಮಂತ್ ಕ್ರಾಂತಿ (Sumanth Kranti) ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರಂತೆ. ಹೀಗಾಗಿ ಸಿಂಹಗೆ ಸಹಜವಾಗಿ ಬೇಸರವಾಗಿದೆ.

Vasishta Simha 1

ಒಂದು ಸಿನಿಮಾ ಮಾಡುವಾಗ ಎಲ್ಲರೂ ಕಷ್ಟ ಪಡುತ್ತಾರೆ. ಅದನ್ನು ತೆರೆಯ ಮೇಲೆ ನೋಡಲು ಇಷ್ಟ ಪಡುತ್ತಾರೆ. ಆದರೆ, ಕಾಲಚಕ್ರ ಸಿನಿಮಾ ಹಾಗಾಗಲಿಲ್ಲ. ಯಾರದೋ ಮೇಲಿನ ಕೋಪಕ್ಕೆ ನಿರ್ದೇಶಕರು ಎಲ್ಲರ ಕನಸು ನಾಶ ಮಾಡೋದು ಸರಿ ಅಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

 

ಕಾಲಚಕ್ರ ಸಿನಿಮಾದ ಬಗ್ಗೆ ಸಿಂಹಗೆ ಅತೀವ ನಿರೀಕ್ಷತೆ ಇತ್ತು. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎಂದು ಹಲವಾರು ಬಾರಿ ನಿರ್ದೇಶಕರೇ ಹೇಳಿಕೊಂಡಿದ್ದಾರೆ. ಆದರೆ, ಯೂಟ್ಯೂಬ್ ನಲ್ಲಿ ಹಾಕಿದ್ದು ಯಾಕೆ ಎನ್ನುವುದನ್ನು ಸಿಂಹ ಸ್ಪಷ್ಟ ಪಡಿಸಲಿಲ್ಲ. ಯಾರದೋ ಮೇಲಿನ ಕೋಪಕ್ಕೆ ಎಂದು ಹೇಳುವ ಮೂಲಕ ಚಿತ್ರತಂಡದಲ್ಲಿ ಯಾವುದೂ ಸರಿ ಇರಲಿಲ್ಲ ಎನ್ನುವ ಕುರುಹು ಬಿಟ್ಟುಕೊಟ್ಟಿದ್ದಾರೆ.

Share This Article