ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆ ಮಗ ವರುಣ್ ತೇಜ್- ಲಾವಣ್ಯ ತ್ರಿಪಾಠಿ (Lavanya Tripathi) ಜೋಡಿ ನವೆಂಬರ್.1ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಇಟಲಿಯಲ್ಲಿ ಅದ್ದೂರಿಯಾಗಿ ಪ್ರೇಮ ಪಕ್ಷಿಗಳು ಮದುವೆಯಾಗಿದ್ದಾರೆ. ಮದುವೆಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಐದಾರು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಕೆಂಪು ಬಣ್ಣದ ಸೀರೆಯಲ್ಲಿ ಲಾವಣ್ಯ ಮಿಂಚಿದ್ರೆ, ಲೈಟ್ ಬಣ್ಣದ ಶೆರ್ವಾನಿಯಲ್ಲಿ ವರುಣ್ (Varun Tej) ಹೈಲೆಟ್ ಆಗಿದ್ದಾರೆ. ಇದನ್ನೂ ಓದಿ:ಕಿಂಗ್ ಖಾನ್ ಹುಟ್ಟು ಹಬ್ಬಕ್ಕೆ ‘ಡಂಕಿ’ ಟೀಸರ್ ರಿಲೀಸ್

‘ಮಿಸ್ಟರ್’ ಸಿನಿಮಾ ಚಿತ್ರೀಕರಣಕ್ಕಾಗಿ ಇಟಲಿಯಲ್ಲಿ ಮೊದಲು ಭೇಟಿಯಾಗಿದ್ದ ಈ ಜೋಡಿ, ಇದೀಗ ಇಲ್ಲಿಯೇ ಗ್ರ್ಯಾಂಡ್ ಆಗಿ ಮದುವೆಯಾಗಿದ್ದಾರೆ. ಇಟಲಿಯಲ್ಲಿಯೇ ಹನಿಮೂನ್‌ಗೂ ಪ್ಲ್ಯಾನ್ ಮಾಡಿದ್ದಾರೆ.


