ಬಾಲಿವುಡ್ ಬಿಗ್ ಆಫರ್ ಬಾಚಿಕೊಂಡ ಮೃಣಾಲ್ ಠಾಕೂರ್

Public TV
1 Min Read
mrunal thakur

‘ಸೀತಾರಾಮಂ’ (Seetharamam) ಬೆಡಗಿ ಮೃಣಾಲ್ ಠಾಕೂರ್ (Mrunal Thakur) ತೆಲುಗು- ಬಾಲಿವುಡ್ ಎರಡರಲ್ಲೂ ಉತ್ತಮ ಅವಕಾಶ ಬಾಚಿಕೊಳ್ತಿದ್ದಾರೆ. ಸದ್ಯ ಬಾಲಿವುಡ್‌ನ ಬಿಗ್ ಪ್ರಾಜೆಕ್ಟ್‌ವೊಂದರಲ್ಲಿ ಮೃಣಾಲ್ ಪಾಲಿಗೆ ದಕ್ಕಿದೆ. ಸ್ಟಾರ್ ನಟನ ಜೊತೆ ರೊಮ್ಯಾನ್ಸ್ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

Mrunal Thakur 2

ವಿಜಯ್ ದೇವರಕೊಂಡ (Vijay Devarakonda) ಜೊತೆಗಿನ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಈ ಬೆನ್ನಲ್ಲೇ ಬಾಲಿವುಡ್‌ನ ಬಿಗ್ ಪ್ರಾಜೆಕ್ಟ್‌ವೊಂದರಲ್ಲಿ ನಟಿಸಲು ನಟಿ ರೆಡಿಯಾಗಿದ್ದಾರೆ. ಡೇವಿಡ್ ಧವನ್ ಮತ್ತು ವರುಣ್ ಧವನ್ (Varun Dhawan) ನಟನೆಯ ಪ್ರಾಜೆಕ್ಟ್‌ನಲ್ಲಿ ಮೃಣಾಲ್ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.

Mrunal Thakur 3

ರಿಯಲ್ ಲೈಫ್ ತಂದೆ ಮತ್ತು ಮಗ ಸಿನಿಮಾದಲ್ಲಿಯೂ ಮತ್ತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವರುಣ್ ಧವನ್‌ಗೆ (Varun Dhawan) ‘ಸೀತಾರಾಮಂ’ ಸುಂದರಿ ನಾಯಕಿಯಾಗಿದ್ದು, ಅವರ ಪಾತ್ರಕ್ಕೂ ಭಾರೀ ಪ್ರಾಮುಖ್ಯತೆ ಇದೆ. 2ನೇ ನಾಯಕಿಯ ಹುಡುಕಾಟದಲ್ಲಿದೆ ಚಿತ್ರತಂಡ. ಇದನ್ನೂ ಓದಿ:ದುಬೈನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಅನಾವರಣ

varun dhawan

ವರುಣ್-ಮೃಣಾಲ್ ಮೊದಲ ಬಾರಿಗೆ ಸಿನಿಮಾಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಇದೊಂದು ಕಾಮಿಡಿ ಕಮ್ ರೊಮ್ಯಾಂಟಿಕ್ ಚಿತ್ರವಾಗಿದೆ. ಮೇ ಅಥವಾ ಜೂನ್‌ನಿಂದ ಚಿತ್ರೀಕರಣ ಶುರುವಾಗಲಿದೆ. ಇಬ್ಬರ ಜೋಡಿ ತೆರೆಯ ಮೇಲೆ ನೋಡೋಕೆ ಫ್ಯಾನ್ಸ್ ಕಾಯುತ್ತಿದ್ದಾರೆ.

ಈ ಚಿತ್ರದ ಜೊತೆಗೆ ಬಾಲಿವುಡ್‌ನ ‘ಪೂಜಾ ಮೇರಿ ಜಾನ್’ ಎಂಬ ಸಿನಿಮಾದಲ್ಲಿ ಮೃಣಾಲ್ ಠಾಕೂರ್ (Mrunal Thakur) ಕಾಣಿಸಿಕೊಂಡಿದ್ದಾರೆ. ತೆಲುಗಿನಲ್ಲಿಯೂ ಸ್ಟಾರ್ ನಟರ ಜೊತೆ ತೆರೆಹಂಚಿಕೊಳ್ತಿದ್ದಾರೆ.

Share This Article