ವೇದಿಕೆ ಮೇಲೆ ವಿದೇಶಿ ಮಾಡೆಲ್‌ಗೆ ಮುತ್ತಿಟ್ಟ ವರುಣ್ ಧವನ್‌ಗೆ ನೆಟ್ಟಿಗರಿಂದ ತರಾಟೆ

Public TV
2 Min Read
varun dhawan

ನೀತಾ ಮುಖೇಶ್ ಅಂಬಾನಿ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಡೀ ಬಾಲಿವುಡ್ (Bollywood) ದಂಡೇ ಸೇರಿತ್ತು. ಇದೀಗ ಈವೆಂಟ್‌ನಲ್ಲಿ ವೇದಿಕೆ ಮೇಲೆ ವಿದೇಶಿ ಮಹಿಳೆಯ ಕೆನ್ನೆಗೆ ಮುತ್ತಿಟ್ಟ ವರುಣ್ ಧವನ್ (Varun Dhawan) ಮೇಲೆ ನೆಟ್ಟಿಗರು ಕಿಡಿಕಾರಿದ್ದಾರೆ. ವಿದೇಶಿ ಮಾಡೆಲ್ ಜೊತೆ ವರುಣ್ ನಡೆದುಕೊಂಡ ರೀತಿಗೆ ನೆಟ್ಟಿಗರಿಂದ ಅಪಸ್ವರ ಕೇಳಿ ಬರುತ್ತಿದೆ.

varun dhawan

ವರುಣ್ ಧವನ್ ಇದೀಗ ಸಿನಿಮಾಗಿಂತ ಟ್ರೋಲ್‌ಗಳ ವಿಚಾರವಾಗಿಯೇ ಸಖತ್ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ಈವೆಂಟ್‌ನಲ್ಲಿ ವೇದಿಕೆ ಮೇಲೆ ಕುಣಿದ ನಟ ವರುಣ್ ಧವನ್ ಅಮೆರಿಕದ ಸೂಪರ್ ಮಾಡೆಲ್ ಗೀಗಿ ಹದೀದ್ (Gigi Hadid) ಅವರನ್ನು ಎತ್ತಿಕೊಂಡು ವೇದಿಕೆ ಮೇಲೆಯೇ ಮುತ್ತು ಕೊಟ್ಟಿದ್ದಾರೆ. ವರುಣ್‌ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವರುಣ್ ಧವನ್‌ ನಡೆಗೆ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ. ಗೀಗಿಯನ್ನು ಎತ್ತಿಕೊಂಡಿದ್ದು ನೃತ್ಯದ ಭಾಗವಾಗಿರಲಿಲ್ಲ, ಬದಲಿಗೆ ಗೀಗಿಯನ್ನು ವೇದಿಕೆಗೆ ಆಹ್ವಾನಿಸಿ ಆಕೆಯನ್ನು ಎತ್ತಿಕೊಂಡು ಮುತ್ತುಕೊಟ್ಟಿದ್ದಾರೆ ವರುಣ್, ಹಾಗಾಗಿ ಟೀಕೆ ವ್ಯಕ್ತವಾಗುತ್ತಿದೆ.

 

View this post on Instagram

 

A post shared by Viral Bhayani (@viralbhayani)

ಗೀಗಿ ಹದೀದಿಯ ಒಪ್ಪಿಗೆ ಇಲ್ಲದೆ ವರುಣ್ ಧವನ್ ಹೀಗೆ ಮುತ್ತುಕೊಟ್ಟಿರುವುದು ಸರಿಯಲ್ಲ ಎಂದು ಹಲವರು ಹೇಳಿದ್ದಾರೆ. ಮಹಿಳೆ ಎಲ್ಲಿಯೂ ಸುರಕ್ಷಿತಳಲ್ಲ, ವರುಣ್ ಧವನ್ ತಮ್ಮ ಹೀರೋತನ ತೋರಿಸಲು ಮಹಿಳೆಯನ್ನು ಹೀಗೆ ಕೀಳಾಗಿ ಬಳಸಿಕೊಂಡಿರುವುದು ಸರಿಯಲ್ಲವೆಂದು ಕೆಲವರು ಟೀಕಿಸಿದ್ದಾರೆ. ವರುಣ್ ಧವನ್ ತಮ್ಮನ್ನು ತಾವು ನಿಯಂತ್ರದಲ್ಲಿಟ್ಟುಕೊಳ್ಳಬೇಕು, ಆನ್‌ಸ್ಕ್ರೀನ್‌ನಲ್ಲಿ ಹೀಗೆ ಮಾಡಿದರೆ ಸರಿ ಎನ್ನಬಹುದು, ಆದರೆ ವೇದಿಕೆಯ ಮೇಲೆ ಹೀಗೆ ಮಾಡುವುದು ಸರಿಯಲ್ಲ ಎಂದು ವರುಣ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ.

ತಮ್ಮ ವಿಡಿಯೋಕ್ಕೆ ವಿರೋಧ ವ್ಯಕ್ತವಾಗುತ್ತಲೆ ಘಟನೆ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ನಟ ವರುಣ್ ಧವನ್, ಬಹುಷಃ ಇಂದು ಬೆಳಿಗ್ಗೆ ನೀವು ಎದ್ದ ಕೂಡಲೇ ಜಾಗೃತಗೊಳ್ಳಲು ನಿರ್ಧರಿಸಿದಂತಿದೆ ಎಂದು ಟ್ರೋಲರ್‌ಗಳ ಕಾಲೆಳೆದಿರುವ ವರುಣ್, ನಿಮ್ಮ ತಪ್ಪು ಕಲ್ಪನೆಯ ನೀರಿನ ಗುಳ್ಳೆಗೆ ನಾನೀಗ ಸೂಜಿ ಚುಚ್ಚಲಿದ್ದೇನೆ, ಗೀಗಿ ಹದೀದ್ ವೇದಿಕೆ ಮೇಲೆ ಬರಬೇಕೆಂಬುದು ಮೊದಲೇ ನಿಶ್ಚಿತವಾಗಿತ್ತು, ಆ ಕಾರ್ಯ ಯೋಜನೆಯಂತೆಯೇ ನಡೆದಿದೆ. ಹಾಗಾಗಿ ನಿಮ್ಮ ಮೂಗು ತೂರಿಸಲು ಬೇರೆ ಯಾವುದಾದರೂ ವಿಷಯವನ್ನು ಹುಡುಕಿಕೊಳ್ಳಿ ಎಂದು ಖಾರವಾಗಿಯೇ ವರುಣ್ ಉತ್ತರಿದ್ದಾರೆ.

Share This Article