ಬಾಲಿವುಡ್ ಖ್ಯಾತ ನಟ ವರುಣ್ ಧವನ್ (Varun Dhawan) ತಂದೆಯಾಗುತ್ತಿದ್ದಾರೆ. ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡು ಈ ಸಿಹಿ ಸುದ್ದಿಯನ್ನು ಅಭಿಮಾನಿಗಳ ಜೊತೆ ಅವರು ಶೇರ್ ಮಾಡಿದ್ದಾರೆ. ತಮ್ಮ ಕುಟುಂಬಕ್ಕೆ ಹಾರೈಕೆ ಇರಲಿ ಎಂದು ಕೇಳಿದ್ದಾರೆ.
ವರ್ಷದ ಹಿಂದೆ ವರುಣ್ ಧವನ್ ತಮ್ಮ ಬಾಲ್ಯದ ಗೆಳತಿ ನತಾಶಾ ದಲಾಲ್ (Natasha) ಅವರನ್ನು ವಿವಾಹವಾಗಿದ್ದರು. ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ವರುಣ್ ತಮ್ಮ ಪತ್ನಿ ನತಾಶಾ ಅವರೊಂದಿಗಿನ ಪೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.
ವರುಣ್ ಮತ್ತು ನತಾಶಾ ಆರನೇ ತರಗತಿಯಿಂದಲೇ ಪರಸ್ಪರ ಪರಿಚಿತರು. ಆದಾದ ಕೆಲ ವರ್ಷಗಳ ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಮೊದಲಿಗೆ ಅವರು ಸಂಗೀತ ಕಚೇರಿಯಲ್ಲಿ ಭೇಟಿಯಾಗಿ, ಬಳಿಕ ಆಗಾಗ್ಗೆ ಭೇಟಿಯಾಗಲು ಪ್ರಾರಂಭಿಸಿದರು. ಅಂತಿಮವಾಗಿ ಅವರು ಡೇಟಿಂಗ್ ಮಾಡಲು ಪ್ರಾರಂಭಿಸಿದರು.
ವರುಣ್ ತನ್ನ ಬಾಲ್ಯದ ಪ್ರಿಯತಮೆ ನತಾಶಾ ಜೊತೆಗಿನ ಸಂಬಂಧದ ಬಗ್ಗೆ ಯಾರಲ್ಲೂ ಹೇಳಿರಲಿಲ್ಲ. ಆದರೆ, ಕಾಫಿ ವಿತ್ ಕರಣ್ 6 ಕಾರ್ಯಕ್ರಮದಲ್ಲಿ ನಾನು ನತಾಶಾ ಜೊತೆ ಡೇಟಿಂಗ್ ಮಾಡುತ್ತಿದ್ದು, ಶೀಘ್ರದಲ್ಲೇ ಮದುವೆಯಾಗುತ್ತೇನೆ ಎಂದು ಹೇಳಿದ್ದರು. ನಂತರ ಮದುವೆ ಆಗಿದ್ದರು.