ನಟ ಉಪೇಂದ್ರ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

Public TV
0 Min Read
upendra1

ಕನ್ನಡ ಚಲನಚಿತ್ರ ನಟ, ನಿರ್ದೇಶಕ ಉಪೇಂದ್ರ (Upendra) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

Upendra

ಮೇ 5ರಂದು (ಇಂದು) ಮಧ್ಯಾಹ್ನದ ಹೊತ್ತಿಗೆ ಹೊಟ್ಟೆಯುರಿಯಿಂದ (ಓವರ್‌ ಅಸಿಡಿಟಿಯಿಂದ) ಬಳಲುತ್ತಿದ್ದ ಅವರು ಪ್ರಾಥಮಿಕ ಚಿಕಿತ್ಸೆಗಳನನ್ನು ಮನೆಯಲ್ಲೇ ತೆಗೆದುಕೊಂಡಿದ್ದರಾದೂ ಅದು ಶಮನವಾಗದ ಕಾರಣ, ತಮ್ಮ ನಿವಾಸಕ್ಕೆ ಹತ್ತಿರವಿರುವ ಸ್ಪರ್ಶ್ ಆಸ್ಪತ್ರೆಗೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ದಾಖಲಾಗಿದ್ದಾರೆ.

UPENDRA 1 7

ಸದ್ಯ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಯುಐ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲೂ ಇದೇ ರೀತಿ ಆಗಿತ್ತು. ಉಪ್ಪಿ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ಅಭಿಮಾನಿಗಳು ಗಾಬರಿಪಡುವ ಅವಶ್ಯಕತೆಯಿಲ್ಲ ಅಂತ ಆಪ್ತ ಮೂಲಗಳು ತಿಳಿಸಿವೆ.

Share This Article