ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ (Upendra) ಅವರೇ ನಿರ್ದೇಶಿಸಿ ನಟಿಸಿರುವ ʻಯುಐʼ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ ಟೀಸರ್, ಸಾಂಗ್ಸ್‌ನಿಂದ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಉಪ್ಪಿ ಅವರೇ ನಿರ್ದೇಶಿಸಿ ನಟಿಸಿದ್ದ ‘ಉಪೇಂದ್ರ’ ಸಿನಿಮಾ (Upendra Cinema) ರೀರಿಲೀಸ್ ಆಗಿದೆ. ರೀರಿಲೀಸ್ ಆಗ್ತಿದ್ದಂತೆ ಮೊದಲ ಶೋನಲ್ಲೇ ಅಭಿಮಾನಿಗಳೊಂದಿಗೆ ಕುಳಿತು ಉಪೇಂದ್ರ ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಉಪೇಂದ್ರ ಸಿನಿಮಾಗೆ 25 ವರ್ಷ ಆದ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ರೀರಿಲೀಸ್ ಆಗಿದೆ. ಬೆಳ್ಳಂಬೆಳಗೆ 6 ಗಂಟೆ ಸುಮಾರಿಗೆ ನಟ ಉಪೇಂದ್ರ ಮೊದಲ ಶೋವನ್ನು ಅಭಿಮಾನಿಗಳೊಂದಿಗೆ ಥಿಯೇಟರ್‌ನಲ್ಲಿ ಕುಳಿತು ವೀಕ್ಷಣೆ ಮಾಡಿದ್ದಾರೆ. ಇದರಿಂದ ಉಪ್ಪಿ ಅಭಿಮಾನಿಗಳೂ ಫುಲ್ ಖುಷ್ ಆಗಿದ್ದಾರೆ. ಉಪ್ಪಿ ಥಿಯೇಟರ್‌ಗೆ ಬರುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ ಮಳೆಗರೆದಿದ್ದಾರೆ.
ಹೌದು. ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಮೊದಲ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಅಜನೀಶ್ ಲೋಕನಾಥ್ ಮ್ಯೂಸಿಕ್‌ನಲ್ಲಿ ಉಪ್ಪಿ ಏನೋ ದೊಡ್ಡದಾಗಿಯೇ ಪ್ಲ್ಯಾನ್ ಮಾಡಿದ್ದಾರೆ. ವಿದೇಶಗಳಲ್ಲಿ ರೆಕಾರ್ಡಿಂಗ್ ಮಾಡಲಾಗಿದೆ. ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಎಂದು ಈಗಾಗಲೇ ಘೋಷಿಸಿದ್ದಾರೆ. ‘ಯುಐ’ ವಿಚಾರ ಪಕ್ಕಕ್ಕಿಟ್ಟರೆ ಈ ಬಾರಿ ಉಪ್ಪಿ ಹುಟ್ಟುಹಬ್ಬಕ್ಕೆ ಮತ್ತೊಂದು ಸರ್‌ಪ್ರೈಸ್ ಕಾಯ್ತಿದೆ. ಈ ನಡುವೆ ʻಉಪೇಂದ್ರʼ ರೀ-ರಿಲೀಸ್ ಆಗಿದೆ. ಇದನ್ನೂ ಓದಿ: ಪ್ರಭಾಸ್ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಲು ಸೈಫ್ ಅಲಿ ಖಾನ್ ದಂಪತಿಗೆ ಆಫರ್
ಸದ್ಯ ಚಿತ್ರರಂಗದಲ್ಲಿ ಹಿಟ್ ಸಿನಿಮಾಗಳನ್ನು ಮತ್ತೆ ಮತ್ತೆ ತೆರೆಗೆ ತರುವ ಪ್ರಯತ್ನ ನಡೀತಿದೆ. ಇತ್ತಿಚೆಗೆ ದರ್ಶನ್ ನಟನೆಯ ʻಕರಿಯʼ ಸಿನಿಮಾ ರೀ-ರಿಲೀಸ್ ಆಗಿತ್ತು. ಇದಕ್ಕೂ ಮುನ್ನ ‘ಜಾಕಿ’, ‘ಶಾಸ್ತ್ರಿ’, ‘ರಾಜಾಹುಲಿ’ ಹೀಗೆ ಹಲವು ಸಿನಿಮಾಗಳು ಮರು ಬಿಡುಗಡೆ ಆಗಿತ್ತು. 3 ತಿಂಗಳ ಹಿಂದೆ ಉಪೇಂದ್ರ ಅವರ ʻಎʼ ಸಿನಿಮಾ ಸಹ ಬಂದಿತ್ತು. ಇದನ್ನೂ ಓದಿ: 42ರ ಹರೆಯದಲ್ಲೂ ಬೋಲ್ಡ್ ಆಗಿ ಕಾಣಿಸಿಕೊಂಡ ಶ್ರೀಯಾ ಶರಣ್
ಹೆಚ್ಚು ಕಮ್ಮಿ 25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾ ಬಿಡುಗಡೆ ಆಗಿ ದಾಖಲೆ ಬರೆದಿತ್ತು. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲೂ ಸಿನಿಮಾ ತೆರೆಗಪ್ಪಳಿಸಿ ಗೆದ್ದಿತ್ತು. ಉಪ್ಪಿ ತಮ್ಮ ವಿಭಿನ್ನ ಶೈಲಿಯ ನಿರ್ದೇಶನ, ನಿರೂಪಣೆ, ನಟನೆಯಿಂದ ಮೋಡಿ ಮಾಡಿದ್ದರು. ಪ್ರೇಮಾ, ದಾಮಿನಿ ಹಾಗೂ ರವೀನಾ ಟಂಡನ್ ನಾಯಕಿಯರಾಗಿ ನಟಿಸಿದ್ದರು.
ಬಹಳ ದಿನಗಳಿಂದ ಅಭಿಮಾನಿಗಳು ‘ಉಪೇಂದ್ರ’ ಸಿನಿಮಾ ರೀ-ರಿಲೀಸ್ ಮಾಡುವಂತೆ ಕೇಳುತ್ತಲೇ ಇದ್ದರು. ಅದರಂತೆ ಆರ್.ಕೆ ಗ್ರೂಪ್ಸ್ ಸಿನಿ ಕಂಬೈನ್ಸ್ ಸಂಸ್ಥೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡುತ್ತಿದೆ. ಇದನ್ನೂ ಓದಿ: ಬಳೆ ಶಾಸ್ತ್ರ ಮಾಡಿಕೊಂಡ ಸೋನಲ್ ಮೊಂಥೆರೋ