ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ ‘ಯುಐ’ (UI Film) ಸಿನಿಮಾದ ಕುರಿತು ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಮ್ಯೂಸಿಕಲ್ ಜರ್ನಿಯ ಮೊದಲ ಝಲಕ್ ಈ ‘ಸೌಂಡ್ ಆಫ್ ಯುಐ’ ಈಗ ರಿವೀಲ್ ಆಗಿದೆ.
ಸೌಂಡ್ ಆಫ್ ‘ಯುಐ’ ಹಾಗಾದ್ರೆ? ಮೊದಲ ಬಾರಿಗೆ ಕನ್ನಡದ ಚಿತ್ರರಂಗದಿಂದ ಇಂಥದ್ದೊಂದು ದಾಖಲೆಗೆ ಮುನ್ನುಡಿ ಬರೆದಿದೆ ಯುಐ ಚಿತ್ರತಂಡ. ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಯುಐ ಮ್ಯೂಸಿಕ್ ಕಾರ್ಯಗಳು ನಡೆದಿರೋದ್ರ ಬಗ್ಗೆ ಸುದ್ದಿ ಕೇಳಿದ್ದ ನಿಮಗೆಲ್ಲಾ ಅದರ ಚಿತ್ರಣ ತೋರಿಸಲು ಮುಂದಾಗಿದೆ ಟೀಮ್. ಜೊತೆಗೆ ಹಿತಕರ ಬಿಜಿಎಂ ಸೌಂಡ್‌ನ ಝಲಕ್ ಈಗ ರಿಲೀಸ್ ಮಾಡಲಾಗಿದೆ.
ಭಾರತದಲ್ಲಿ ಹಲವು ಪ್ರಕಾರದ ಸಂಗೀತ ವಾದ್ಯಗಳನ್ನ ಉಪಯೋಗಿಸಲಾಗುತ್ತದೆ ಸ್ಪೆಷಲ್ ಇನ್‌ಸ್ಟ್ರುಮೆಂಟ್ಸ್ ಅವಶ್ಯವಿದ್ದಲ್ಲಿ ತರಿಸಿ ಇಲ್ಲಿಯೇ ಸಂಯೋಜಿಸಲಾಗತ್ತೆ. ಆದರೆ ಯುಐ ತಂಡ ಇನ್ನೋಂದು ಹೆಜ್ಜೆ ಮುಂದೆ ಹೋಗಿ, ಹಂಗೇರಿಯ ಕ್ಯಾಪಿಟಲ್ ಸಿಟಿ ಬುಡಾಪೆಸ್ಟ್‌ನಲ್ಲಿ ಹಲವು ದಿನಗಳು ಇದ್ದು ಸಂಗೀತ ಸಂಯೋಜನೆ ಮಾಡಿಕೊಂಡು ಬಂದಿದೆ. ಇಲ್ಲಿ ‘ಯುಐ’ ಬಿಜಿಎಂ ಹಾಗೂ ಕೆಲವು ಹಾಡುಗಳನ್ನೂ ರೆಕಾರ್ಡಿಂಗ್ ಮಾಡಿಕೊಳ್ಳಲಾಗಿದೆ. ನೂರಾರು ವಾದ್ಯಗಳು ಒಮ್ಮೆಲೇ ಟ್ರೂನ್ ಆಗಿವೆ. ಆ ಬಿಜಿಎಂ ಸೌಂಡ್‌ನ ಝಲಕ್ ‘ಯುಐ’ ಸಿನಿಮಾದ ಹೈಲೈಟ್.ಇದನ್ನೂ ಓದಿ:`ಬಾರ್ಡರ್’ ಸಿನಿಮಾದ ಸಿಕ್ವೇಲ್: 27 ವರ್ಷಗಳ ನಂತರ ಹೊಳೆದ ಕಥೆ
Experience the ????#SoundOfUi ???? ! ಹಂಗೇರಿಯಲ್ಲಿ 90-ಪೀಸ್ ಆರ್ಕೆಸ್ಟ್ರಾ #UITheMovieಗಾಗಿ ಮಾಡಿರುವ ಮ್ಯಾಜಿಕ್! #UITheMovie
▶️ https://t.co/ahdwd7EwLy pic.twitter.com/l2E6vLZLk2
— Upendra (@nimmaupendra) August 23, 2024
ಉಪೇಂದ್ರ ಬಹುವರ್ಷಗಳ ಬಳಿಕ ನಿರ್ದೇಶಿಸಿರುವ ಚಿತ್ರ ‘ಯುಐ’. ಲಹರಿ ಫಿಲ್ಮ್ಸ್ ಜೊತೆ ವೀನಸ್ ಎಂಟರ್‌ಪ್ರೈಸ್ ಜಂಟಿಯಾಗಿ ನಿರ್ಮಿಸಿರುವ ಚಿತ್ರ. ‘ಯುಐ’ ಮೂಲಕ ಸ್ಯಾಂಡಲ್‌ವುಡ್ ಇನ್ನೊಮ್ಮೆ ಜಗತ್ತಿನಾದ್ಯಂತ ವಿಜಯಪತಾಕೆ ಹಾರಿಸುವ ನಿರೀಕ್ಷೆಯೂ ಇದೆ. ಉಪೇಂದ್ರಗೆ ಜೋಡಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ಮೊದಲ ಬಾರಿಗೆ ನಟಿಸಿದ್ದಾರೆ. ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಸದ್ಯ ಸಿನಿಮಾ ಸೌಂಡ್ ಆಫ್ ಯುಐನಿಂದ ಸದ್ದು ಮಾಡುತ್ತಿದೆ.