ಬೆಂಗಳೂರು: ನಾನೇ ಬೇರೆ ನನ್ನ ರೂಟೇ ಬೇರೆ ಅಂತ ಸ್ಯಾಂಡಲ್‍ವುಡ್‍ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ ಕಲಾವಿದ ರಿಯಲ್ ಸ್ಟಾರ್ ಉಪೇಂದ್ರ. ಡಿಫರೆಂಟ್ ಯೋಚನೆ, ಯೋಜನೆಗಳ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಸೂಪರ್ ಸ್ಟಾರ್, ರಿಯಲ್ ಸ್ಟಾರ್ ಅಂತ ಅಭಿಮಾನಿಗಳಿಂದ ಕರೆಸಿಕೊಂಡಿದ್ದಾರೆ.
ಸದ್ಯ ಹೋಮ್ ಮಿನಿಸ್ಟರ್ ಸಿನಿಮಾಗೆ ಬಣ್ಣ ಹಚ್ಚಿರುವ ಉಪ್ಪಿ ಗಾಂಧಿನಗರ ಬಿಟ್ಟು ವಿಧಾನಸೌಧದಲ್ಲಿ ಸೀಟ್ ಫಿಕ್ಸ್ ಮಾಡಿಕೊಳ್ಳುವ ತವಕದಲ್ಲಿದ್ದಾರೆ. ಪ್ರಜಾಕೀಯದ ಮೂಲಕ ಸಮಾಜದ ಬದಲಾವಣೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಈಗಷ್ಟೇ ಕೆಪಿಜೆಪಿ ಪಾರ್ಟಿಯ ಆ್ಯಪ್ ರಿಲೀಸ್ ಮಾಡಿ ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗ್ತಿರೋ ಉಪ್ಪಿ ಬಣ್ಣದ ಲೋಕದಿಂದ ಸ್ವಲ್ಪ ದೂರ ಆಗುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳನ್ನ ಮಾಡುತ್ತಿದ್ದ ಉಪೇಂದ್ರರ ಕೈಯಲ್ಲಿ ಉಳಿದಿರೋದು ಮೂರೇ ಮೂರು ಸಿನಿಮಾಗಳು ಮಾತ್ರ. ಅದರಲ್ಲಿ `ಉಪ್ಪಿ ಮತ್ತೆ ಬಾ’ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ.
Advertisement
Advertisement
ಇನ್ನು ಬುದ್ಧಿವಂತ ಬಣ್ಣ ಹಚ್ಚಿರೋ ಉಪ್ಪಿರುಪ್ಪಿ ಸಿನಿಮಾ ಭಾಗಶಃ ಮುಗಿದಿದೆ. ಇನ್ನು ಉಳಿದಿರೋದು ಹೋಮ್‍ಮಿನಿಸ್ಟರ್ ಸಿನಿಮಾ ಮಾತ್ರ. ಇದೂ ಒಂದು ಹಂತಕ್ಕೆ ಚಿತ್ರೀಕರಣ ಪೂರ್ತಿ ಮಾಡಿಕೊಂಡಿದೆ. ಹೈದರಾಬಾದ್‍ನಲ್ಲಿ ಮತ್ತೊಂದು ಶೆಡ್ಯೂಲ್‍ಗೆ ಪ್ಲಾನ್ ಮಾಡಲಾಗಿದೆ. ಹೋಮ್‍ಮಿನಿಸ್ಟರ್ ಕಥೆ ಮುಗಿದ್ರೆ ಗಾಂಧಿನಗರದಲ್ಲಿ ಉಪ್ಪಿಯವರ ಎಲ್ಲಾ ಕಮಿಟ್ಮೆಂಟ್‍ಗಳು ಕಂಪ್ಲೀಟ್ ಆಗುತ್ತವೆ. ಈ ಚಿತ್ರದ ಬಳಿಕ ಸಿನಿರಂಗದಲ್ಲಿ ರಿಯಲ್ ಸ್ಟಾರ್ ಉಪ್ಪಿ ಯಾವುದೇ ಸಿನಿಮಾಮಗಳನ್ನು ಒಪ್ಪಿಕೊಂಡಿಲ್ಲ.
Advertisement
ಅದು ಎಲ್ಲಿವರೆಗೆ ಅನ್ನೋದು ಮಾತ್ರ ಸಸ್ಪೆನ್ಸು. ಯಾಕೆಂದರೆ ಎಂಟು ವರ್ಷ ರಾಜಕಾರಣಿಯಾಗಿ ಮೆರೆದು, ನಂತರ ಮೆಗಾಸ್ಟಾರ್ ಚಿರಂಜೀವಿ ಮತ್ತೆ ಬಣ್ಣ ಹಚ್ಚಿರುವ ಉದಾಹರಣೆಗಳು ನಮ್ಮ ಮುಂದಿವೆ. ಉಪ್ಪಿಯೂ ಹಾಗೆ ಮಾಡುತ್ತಾರಾ ಅಥವಾ ಪ್ರಜಾಕೀಯದಲ್ಲಿಯೇ ಶಾಶ್ವತವಾಗಿಯೇ ಉಳಿಯುತ್ತಾರಾ? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಹುಟ್ಟಿಕೊಂಡಿವೆ.