ರಿಯಲ್ ಸ್ಟಾರ್ ಉಪೇಂದ್ರ (Upendra) ಅವರಿಗೆ ನಟನೆ ಮತ್ತು ಡೈರೆಕ್ಷನ್‌ಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಕ್ರೇಜ್ ಇದೆ. ಇನ್ನೂ ಕನ್ನಡದ ಸಾಲು ಸಾಲು ಸಿನಿಮಾಗಳ ನಡುವೆ ತಲೈವಾ ಜೊತೆ ‘ಕೂಲಿ’ (Coolie) ಚಿತ್ರ ಕೂಡ ಮಾಡ್ತಿದ್ದಾರೆ. ಈಗ ‘ಯುಐ’ (UI Film) ಸುದ್ದಿಗೋಷ್ಠಿಯಲ್ಲಿ ಕೂಲಿ ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ವಿಚಾರವನ್ನು ನಟ ರಿವೀಲ್ ಮಾಡಿದ್ದಾರೆ.
ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಚಿತ್ರದಲ್ಲಿ ರಜನಿಕಾಂತ್ ಸರ್ (Rajanikanth) ಜೊತೆ ಸಿನಿಮಾ ಮಾಡುತ್ತಿದ್ದೇನೆ. ಚಿತ್ರದಲ್ಲಿ ಒಂದೊಳ್ಳೆಯ ಪಾತ್ರ ಮಾಡ್ತಿದ್ದೀನಿ, ವಿಲನ್ ರೋಲ್ ಅಲ್ಲ ಎಂದು ಉಪೇಂದ್ರ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ಉಪೇಂದ್ರ ಹುಟ್ಟುಹಬ್ಬ: ‘ಯುಐ’ ಚಿತ್ರದ ರಿಲೀಸ್ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಚಿತ್ರತಂಡ
ಈ ಹಿಂದೆ ರಜನಿಯ ‘ಜೈಲರ್’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿ ಭಾರೀ ಗಮನ ಸೆಳೆದಿದ್ದರು. ಅದೇ ರೀತಿ ಇನ್ನೋರ್ವ ಕನ್ನಡದ ಸ್ಟಾರ್ ನಟ ಉಪೇಂದ್ರ ಕೂಡ ನಟಿಸುತ್ತಿದ್ದಾರೆ. ಈಗಾಗ್ಲೇ ಕಾಲಿವುಡ್-ಟಾಲಿವುಡ್‌ಗಳಲ್ಲಿ ಚಿರಪರಿಚಿತರಾಗಿರುವ ಉಪೇಂದ್ರರನ್ನು ಎರಡನೇ ಬಹುಮುಖ್ಯ ಪಾತ್ರವನ್ನಾಗಿ ಡಿಸೈನ್ ಮಾಡಲಾಗಿದೆ. ತಲೈವಾ ಮತ್ತು ಉಪೇಂದ್ರ ಕಾಂಬಿನೇಷನ್ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.