ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ಕನ್ನಡ ಮಾತ್ರವಲ್ಲ ಪರಭಾಷೆಯ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಯುಐ ಸಕ್ಸಸ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಕರ್ವ’ ಡೈರೆಕ್ಟರ್ ನವನೀತ್ ನಿರ್ದೇಶನದಲ್ಲಿ ಐಪಿಎಲ್ ಕುರಿತಾದ ಕ್ರೀಡಾ ಪ್ರಧಾನ ಚಿತ್ರದಲ್ಲಿ ನಟಿಸಲು ಉಪೇಂದ್ರ ಓಕೆ ಎಂದಿದ್ದಾರೆ.
ಸದಾ ಹೊಸ ಬಗೆಯ ಪಾತ್ರದಲ್ಲಿ ನಟಿಸೋ ಉಪೇಂದ್ರ ಈಗ ಐಪಿಎಲ್ ಕುರಿತಾದ ಕ್ರೀಡಾ ಪ್ರಧಾನ ಚಿತ್ರದಲ್ಲಿ ಶ್ರೀಮಂತ್ರ ಉದ್ಯಮಿಯಾಗಿ ಕಾಣಿಸಿಕೊಳ್ತಿದ್ದಾರೆ. ಜುಲೈ 15ರಿಂದ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ. ಇದನ್ನೂ ಓದಿ:‘ಸೂರ್ಯ 46’ ಅದ್ಧೂರಿ ಚಾಲನೆ- ‘ರೆಟ್ರೋ’ ಹೀರೋಗೆ ‘ಪ್ರೇಮಲು’ ನಟಿ ಜೋಡಿ
ಕ್ರಿಕೆಟ್‌ಗೆ ಸಂಬಂಧಿಸಿದ ಈ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮೂಡಿ ಬರಲಿದೆ. ಈ ವರ್ಷದ ಅಂತ್ಯ ಅಥವಾ 2026ರಲ್ಲಿ ಸಿನಿಮಾ ತೆರೆಗೆ ಬರಲಿದೆ. ಇದನ್ನೂ ಓದಿ:’ದಿ ಗರ್ಲ್‌ಫ್ರೆಂಡ್’ ಸಿನಿಮಾ ಏನಾಯ್ತು?- ಕೊನೆಗೂ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ರು ರಶ್ಮಿಕಾ
ಅಂದಹಾಗೆ, ರಾಮ್ ಪೋತಿನೇನಿ (Ram Pothineni) ನಟನೆಯ ‘ಆಂಧ್ರ ಕಿಂಗ್ ತಾಲೂಕಾ’ ಚಿತ್ರದಲ್ಲಿ ಉಪೇಂದ್ರ ಸೂಪರ್ ಸ್ಟಾರ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ (Rajinikanth) ಜೊತೆ ‘ಕೂಲಿ’ (Coolie) ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಭಾರ್ಗವ, 45 ಸಿನಿಮಾಗಳು ನಟನ ಕೈಯಲ್ಲಿವೆ.