ಬೆಂಗಳೂರು: ಸ್ಯಾಂಡಲ್‍ವುಡ್ ಕ್ಯೂಟ್ ಪೇರ್ ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟು 18 ವರ್ಷ ಕಳೆದಿದ್ದು, ತಮ್ಮ ವಾರ್ಷಿಕೋತ್ಸವನ್ನು ರೆಸಾರ್ಟ್‍ವೊಂದರಲ್ಲಿ ರೋಮ್ಯಾಂಟಿಕ್ ಆಗಿ ಆಚರಿಸಿದ್ದಾರೆ.
ಯಾವಾಗಲೂ ಸಖತ್ ಕ್ರಿಯೆಟೀವ್ ಆಗಿ ಆಲೋಚಿಸುವ ಉಪೇಂದ್ರ ಅವರು, ಕನ್ನಡದಲ್ಲಿ ಹೊಸ ರೀತಿಯ ಬಗೆ, ಬಗೆಯ ಸಿನಿಮಾಗಳನ್ನು ನೀಡುತ್ತಲೇ ಬಂದಿದ್ದಾರೆ. ಸದಾ ಸಿನಿಮಾ ಶೂಟಿಂಗ್, ರಾಜಕೀಯ ಎಂದೆಲ್ಲಾ ಬ್ಯುಸಿಯಾಗಿರುವ ಉಪೇಂದ್ರ ಅವರು ಒಬ್ಬ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಕೂಡ ಹೌದು. ಇದಕ್ಕೆ ಆಗಾಗಾ ಅವರ ಮನೆಯಲ್ಲಿ ಹಬ್ಬದ ಸಂದರ್ಭಗಳಲ್ಲಿ ಸಂಪ್ರದಾಯಿಕ ಪೂಜೆ, ಆಚರಣೆಗಳೇ ಸಾಕ್ಷಿ ಎನ್ನಬಹುದು. ತಾವೂ ಎಷ್ಟೇ ಬ್ಯೂಸಿಯಾಗಿದ್ದರೂ ಈ ಮಧ್ಯೆ ಪತ್ನಿ, ಮಕ್ಕಳಿಗೂ ಕೂಡ ಅಷ್ಟೇ ಸಮಯ ಮೀಸಲಿಡುತ್ತಾರೆ. ಇದನ್ನೂ ಓದಿ: ಮೊದಲ ಪದಗಳನ್ನು ಕಲಿಯುತ್ತಿರುವ ರಾಯನ್ – ಫುಲ್ ಖುಷ್ ಆದ ಮೇಘನಾ
ಸದ್ಯ ಡಿಸೆಂಬರ್ 14ಕ್ಕೆ ಉಪೇಂದ್ರ ಹಾಗೂ ಪ್ರಿಯಾಂಕಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 18 ವರ್ಷ ಕಳೆದಿದ್ದು, ಇದೇ ಖುಷಿಯಲ್ಲಿ ದಂಪತಿ ಕೇರಳದಲ್ಲಿರುವ ವೈಲ್ಡ್ ಪ್ಲಾನೆಟ್ ರೆಸಾರ್ಟ್‍ಗೆ ಭೇಟಿ ನೀಡಿ ಇಬ್ಬರು ಏಕಾಂತವಾಗಿ ಕಾಲ ಕಳೆದಿದ್ದಾರೆ. ಜೊತೆಗೆ ತಮ್ಮ ವಿವಾಹವಾರ್ಷಿಕೋತ್ಸವವನ್ನು ಕೇಕ್ ಕಟ್ ಮಾಡಿ ಸಖತ್ ರೋಮ್ಯಾಂಟಿಕ್ ಆಗಿ ಆಚರಿಸಿದ್ದಾರೆ.
ಇನ್ನೂ ಈ ಫೋಟೋಗಳನ್ನು ಪ್ರಿಯಾಂಕಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಥ್ಯಾಂಕ್ಯು ವೈಲ್ಡ್ ಪ್ಲಾನೆಟ್ ರೆಸಾರ್ಟ್. ಬೆಚ್ಚಗಿನ ಮತ್ತು ಮರೆಯಲಾಗದಂತಹ ಅನುಭವ. ಅಲ್ಲಿನ ಸುಂದರವಾದ ದೃಶ್ಯಗಳು, ಅಧಿಕೃತ ಕೊಠಡಿಗಳು, ರುಚಿಕರವಾದ ಫುಡ್, ಸಿಬ್ಬಂದಿಯ ಸ್ನೇಹ ಮತ್ತು ವಿಶ್ವಾಸ ನಿಮ್ಮ ಅದ್ಭುತ ಆತಿಥ್ಯ ನಮಗೆ ಬಹಳ ಇಷ್ಟವಾಯಿತು. ಮತ್ತೊಮ್ಮೆ ವೈಲ್ಡ್ ಪ್ಲಾನೆಟ್ ರೆಸಾರ್ಟ್‍ಗೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬೋಲ್ಡ್ ದೃಶ್ಯಗಳೇ ಸಮಂತಾ ದಾಂಪತ್ಯಕ್ಕೆ ಮುಳುವಾಯ್ತು!
View this post on Instagram
ಉಪೇಂದ್ರ ಹಾಗೂ ಪ್ರಿಯಾಂಕಾ ಪ್ರೀತಿಸಿ 2003ರ ಡಿಸೆಂಬರ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಈ ದಂಪತಿಗೆ ಆಯುಷ್ ಹಾಗೂ ಐಶ್ವರ್ಯ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.