ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು 56ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬವನ್ನ ಇಂದು (ಸೆ.18) ಊರ್ವಶಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಸೆಲೆಬ್ರೇಟ್ ಮಾಡಿದ್ದಾರೆ. ಉಪ್ಪಿ ನಿರ್ದೇಶನದ ಬಹುನಿರೀಕ್ಷಿತ ‘ಯುಐ’ ಟೀಸರ್ ರಿಲೀಸ್‌ಗೆ ಕ್ಷಣ ಗಣನೆ ಶುರುವಾಗಿದೆ.
ಉಪೇಂದ್ರ (Upendra) ಅವರಿಗೆ ಈ ವರ್ಷ ತುಂಬಾನೇ ಸ್ಪೆಷಲ್ ಆಗಿದ್ದು, ಗಣೇಶ ಹಬ್ಬದ (Ganesh Festival) ಜೊತೆ ತಮ್ಮ ಹುಟ್ಟುಹಬ್ಬ ಕೂಡ ಆಚರಣೆ ಮಾಡ್ತಿದ್ದಾರೆ. ಊರ್ವಶಿ ಚಿತ್ರಮಂದಿರಕ್ಕೆ ಆಗಮಿಸಿ ಅದ್ದೂರಿಯಾಗಿ ಉಪೇಂದ್ರ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಕೇಕ್ ಕತ್ತರಿಸಿ, ಅಭಿಮಾನಿಗಳಿಗೆ ಸಿಹಿ ತಿನಿಸಿದ್ದಾರೆ. ಬಳಿಕ ಫ್ಯಾನ್ಸ್ ಜೊತೆ ಸೆಲ್ಫಿಗೆ ಉಪ್ಪಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಸಿದ್ಧಾರ್ಥ್ ಅಭಿನಯದ ‘ಚಿಕ್ಕು’ ಕನ್ನಡದಲ್ಲೂ ರಿಲೀಸ್
ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಯುಐ (UI Film) ಸಿನಿಮಾದ ಫಸ್ಟ್ ಟೀಸರ್ ಇಂದು ಸಂಜೆ 6:30ಕ್ಕೆ ರಿವೀಲ್ ಆಗುತ್ತಿದೆ. ಯುಐ ಟೀಸರ್‌ನ ಶಿವರಾಜ್‌ಕುಮಾರ್ ಮತ್ತು ದುನಿಯಾ ವಿಜಯ್ ಲಾಂಚ್ ಮಾಡಲಿದ್ದಾರೆ.