ಮೊದಲ ಗರ್ಲ್‌ಫ್ರೆಂಡ್‌ ಬಗ್ಗೆ ರಿವೀಲ್ ಮಾಡಿದ ಟೈಗರ್ ಶ್ರಾಫ್

Public TV
2 Min Read
kriti sanon

ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಅವರು ‘ಬಡೇ ಮಿಯಾನ್ ಚೋಟೆ ಮಿಯಾನ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಒಟಿಟಿ ಕಾರ್ಯಕ್ರಮವೊಂದಲ್ಲಿ ಮೊದಲ ಗರ್ಲ್‌ಫ್ರೆಂಡ್‌ ಬಗ್ಗೆ ಟೈಗರ್‌ ಶ್ರಾಫ್‌ ಬಾಯ್ಬಿಟ್ಟಿದ್ದಾರೆ. 25ನೇ ವಯಸ್ಸಿಗೆ ಎಂಗೇಂಜ್‌ ಆಗಿದ್ದರ ಬಗ್ಗೆ ನಟ ತಿಳಿಸಿದ್ದಾರೆ. ಇದನ್ನೂ ಓದಿ:ಸಾಯಿ ಪಲ್ಲವಿ ಬದಲು ಮೃಣಾಲ್‌ಗೆ ವಿಜಯ್ ಚಾನ್ಸ್ ಕೊಟ್ಟಿದ್ದೇಕೆ?

Tiger Shroff 1

ಇತ್ತೀಚೆಗೆ ಒಟಿಟಿ ಕಾರ್ಯಕ್ರಮವೊಂದು ಅದ್ಧೂರಿಯಾಗಿ ನಡೆದಿದೆ. ಈ ಇವೆಂಟ್‌ಗೆ ಹಲವು ಬಾಲಿವುಡ್ ನಟ-ನಟಿಯರು ಭಾಗಿಯಾಗಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿದ ಬಳಿಕ ಖಾಸಗಿ ವಿಚಾರವೊಂದು ಟೈಗರ್ ಶ್ರಾಫ್ ರಿವೀಲ್ ಮಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಸದಾ ದಿಶಾ ಜೊತೆಗಿನ ಲವ್‌ ರಿಲೇಷನ್‌ಶಿಪ್‌ ಬಗ್ಗೆ ಸುದ್ದಿಯಾಗ್ತಿದ್ದ ಟೈಗರ್‌ ಶ್ರಾಫ್‌ ಈಗ ಮೊದಲ ಪ್ರೇಯಸಿ ಬಗ್ಗೆ ಮಾತನಾಡಿರೋದು ಅಕ್ಷರಶಃ ಬಾಲಿವುಡ್‌ ನಟ ವರುಣ್‌ ಧವನ್‌ಗೆ ಶಾಕ್‌ ಕೊಟ್ಟಿದೆ.

kriti sanon3

ವೇದಿಕೆಯಲ್ಲಿ ವರುಣ್ ಧವನ್ ಜೊತೆ ಮಾತನಾಡುವಾಗ ನಾನು ನಾಚಿಕೆ ಸ್ವಭಾವದ ವ್ಯಕ್ತಿ ಹಾಗಾಗಿ ನನಗೆ ಮೊದಲ ಗರ್ಲ್‌ಫ್ರೆಂಡ್‌ ಸಿಕ್ಕಿದ್ದೆ, 25 ವರ್ಷ ಆದಾಗ ಎಂದು ಟೈಗರ್ ಶ್ರಾಫ್ ಮಾತನಾಡಿದ್ದಾರೆ. ನೀನು ಸೀರಿಯಸ್‌ ಆಗಿ ಹೇಳ್ತಿದ್ದೀಯಾ? ಎಂದು ಶಾಕ್ ಆಗಿ ವರುಣ್ ಧವನ್ ಕೇಳಿದ್ದಾರೆ.

kriti sanon3

ನಿಜ ನನಗೆ ಮೊದಲ ಗರ್ಲ್‌ಫ್ರೆಂಡ್‌ ಸಿಕ್ಕಿದ್ದು 25 ವರ್ಷ ಆದಾಗ, ನನ್ನ ಮೊದಲ ಚಿತ್ರದ ಆಡಿಷನ್ ಸಮಯದಲ್ಲಿ ಎಂದು ಟೈಗರ್ ಶ್ರಾಫ್ ವಿವರಿಸಿದ್ದಾರೆ. ತಕ್ಷಣವೇ ಕೃತಿ ಸನೋನ್ ಅಲ್ವಾ? ಎಂದು ವರುಣ್ ಧವನ್ (Varun Dhawan) ಹೇಳಿದ್ದಾರೆ. ಅವರ ಮಾತನ್ನು ಟೈಗರ್ ಶ್ರಾಫ್ ತಳ್ಳಿಹಾಕಿದ್ದಾರೆ. ನಗುತ್ತಲೇ ಅವರಲ್ಲ ಬಿಡಿ ಎಂದು ನಟ ಸ್ಟಷ್ಟನೆ ನೀಡಿದ್ದಾರೆ. ಕಡೆಗೂ ಆ ಹುಡುಗಿ ಯಾರು ಎಂಬುದನ್ನು ಟೈಗರ್ ಶ್ರಾಪ್ ಗುಟ್ಟಾಗಿಯೇ ಇಟ್ಟಿದ್ದಾರೆ. ಸದ್ಯ ಈ ನಟ ಮಾತನಾಡಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ನಟ ಹೇಳದೇ ಇದ್ರೆ ಏನಂತೆ ದಿಶಾ ಪಟಾನಿ ಅವರ ಮೊದಲ ಗರ್ಲ್‌ಫ್ರೆಂಡ್‌ ಅಲ್ವಾ? ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

ಅಂದಹಾಗೆ, ಟೈಗರ್ ಶ್ರಾಫ್ ಅವರು ‘ಹೀರೋಪಂತಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರಕ್ಕೆ ಕೃತಿ ಸನೋನ್ ನಾಯಕಿಯಾಗಿದ್ದರು. ಹಾಗಾಗಿ ಕೃತಿ ಸನೋನ್‌ ಅಥವಾ ದಿಶಾ ಇರಬಹುದಾ ಎಂದು ಫ್ಯಾನ್ಸ್‌ ಯೋಚಿಸುತ್ತಿದ್ದಾರೆ. ದಿಶಾ ಪಟಾನಿ ಜೊತೆ ಟೈಗರ್‌ ಶ್ರಾಫ್‌ ಡೇಟಿಂಗ್‌ ಮಾಡಿದ್ದರು. ಕಳೆದ ವರ್ಷ ಇಬ್ಬರ ಪ್ರೀತಿಗೆ ಬ್ರೇಕ್‌ ಬಿದ್ದಿದೆ.

Share This Article