‘ಜೋಡಿಹಕ್ಕಿ’ ಸೀರಿಯಲ್ ಖ್ಯಾತಿಯ ನಟ ತಾಂಡವೇಶ್ವರ್ (Thandaveshwar) ನಿರ್ದೇಶಕ ಭರತ್ ಮೇಲೆ ಗುಂಡು ಹಾರಿಸಿದ್ದಕ್ಕೆ ಚಂದ್ರಾಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಫೈರಿಂಗ್ ಪ್ರಕರಣದ ಕುರಿತು ಕಮಿಷನರ್ ದಯಾನಂದ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಗೊತ್ತಿದ್ದೆ ಏರ್‌ಫೈರ್ ಮಾಡಿರೋದು ಗೊತ್ತಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ (B. Dayanand) ತಿಳಿಸಿದ್ದಾರೆ. ಇದನ್ನೂ ಓದಿ:BBK 11: ಧರ್ಮ ಐ ಲೈಕ್ ಯೂ ಎಂದ ಶೋಭಾ ಶೆಟ್ಟಿ
Advertisement
ನಿನ್ನೆ (ನ.18) ಸಂಜೆ ಈ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಆರೋಪಿ ತಾಂಡವ್‌ರನ್ನು ಈಗಾಗಲೇ ಬಂಧಿಸಿದ್ದೇವೆ. ಕೃತ್ಯಕ್ಕೆ ಬಳಸಿದ ಗನ್ ಸೀಜ್ ಮಾಡಲಾಗಿದೆ. ಸಿನಿಮಾಗೆ ಸಂಬಂಧಿಸಿದಂತೆ ಹಣಕಾಸಿನ ವ್ಯವಹಾರದಲ್ಲಿ ತಾಂಡವ್ ಮತ್ತು ನಿರ್ದೇಶಕ ಭರತ್ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎಂಬುದು ಪ್ರಾರಂಭಿಕ ತನಿಖೆಯಲ್ಲಿ ತಿಳಿದು ಬಂದಿದೆ. ಗುಂಡು ಹಾರಿಸಬೇಕು ಎಂಬ ದೃಷ್ಟಿಕೋನದಲ್ಲಿ ಹೀಗೆ ಮಾಡಿದ್ದು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಮಾತನಾಡಿದ್ದಾರೆ.
Advertisement
ಅಷ್ಟಕ್ಕೂ ಆಗಿದ್ದೇನು?
Advertisement
‘ದೇವನಾಂಪ್ರಿಯ’ ಸಿನಿಮಾದಲ್ಲಿ ತಾಂಡವ್ ಹೀರೋ ಆಗಿ ನಟಿಸುತ್ತಿದ್ದರು. ಈ ಚಿತ್ರಕ್ಕೆ ಭರತ್ ನಿರ್ದೇಶನ ಮಾಡುತ್ತಿದ್ದರು. ಕಳೆದ 2 ವರ್ಷಗಳಿಂದ ನಡೆಯುತ್ತಿದ್ದ ಸಿನಿಮಾ ಶೂಟಿಂಗ್, ನಿರ್ಮಾಪಕರು ಸಿಗದ ಹಿನ್ನೆಲೆ ಹಂತ ಹಂತವಾಗಿ ನಟ ತಾಂಡವ್ 6 ಲಕ್ಷ ಚಿತ್ರಕ್ಕೆ ಹೂಡಿಕೆ ಮಾಡಿದರು. ಪ್ರಸ್ತುತ ಹಾಸನದ ಕುಮಾರಸ್ವಾಮಿ ಎಂಬುವವರು ಚಿತ್ರಕ್ಕೆ ಹೂಡಿಕೆ ಮಾಡಿದ್ದಾರೆ.
Advertisement
ಬೇರೆ ನಿರ್ಮಾಪಕರು ಸಿಕ್ಕಿದರು ಕೂಡ ಸಿನಿಮಾ ಶೂಟಿಂಗ್ ಅನ್ನು ನಿರ್ದೇಶಕ ಭರತ್ ನಿಲ್ಲಿಸಿದರು. ಈ ಹಿನ್ನೆಲೆ ತಾವು ಕೊಟ್ಟಿದ್ದ 6 ಲಕ್ಷ ರೂ. ತಾಂಡವ್ ವಾಪಸ್ ಕೇಳಿದರು. ಹಣಕಾಸಿನ ವಿಚಾರ ಚರ್ಚಿಸುವ ವೇಳೆ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ನಟ ತಾಂಡವ್ ಗನ್ ಹಿಡಿದು ಭರತ್ ಕಡೆ ಗುಂಡು ಹಾರಿಸಿದ್ದಾರೆ. ಆದರೆ ಆ ಗುಂಡಿನ ದಾಳಿಯಿಂದ ಭರತ್ ತಪ್ಪಿಸಿಕೊಂಡಿದ್ದಾರೆ. ಇದೀಗ ಭರತ್ ದೂರಿನ ಮೇರೆಗೆ ತಾಂಡವ್‌ರನ್ನು ಚಂದ್ರಲೇಔಟ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.