ಕಲಾವಿದರ ಸಂಘಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ ವಿಜಯ್

Public TV
1 Min Read
vijay

ಕಾಲಿವುಡ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಅವರು ತಮ್ಮದೇ ಸ್ವಂತ ಪಕ್ಷ ಕಟ್ಟಿ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಸದ್ಯ ಒಪ್ಪಿಕೊಂಡಿರುವ ಸಿನಿಮಾ ಪೂರ್ತಿ ಮಾಡಿ ಇನ್ಮುಂದೆ ಫುಲ್ ಟೈಮ್ ಜನ ಸೇವೆ ಮಾಡುವುದಕ್ಕೆ ಸಮಯ ಮೀಸಲಿಡುತ್ತಾರೆ. ಹೀಗಿರುವಾಗ ಕಲಾವಿದರ ಸಂಘವೊಂದಕ್ಕೆ ವಿಜಯ್ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.

vijay thalapathyತಮಿಳುನಾಡಿನ ‘ನಡಿಗರ್ ಸಂಘಂ’ ಎಂಬ ಕಲಾವಿದರ ಸಂಘದ ಕಟ್ಟಡವೊಂದು ನಿರ್ಮಾಣವಾಗುತ್ತಿದೆ. ಆ ಕಟ್ಟದ ನಿರ್ಮಾಣಕ್ಕೆ ಬರೋಬ್ಬರಿ 1 ಕೋಟಿ ರೂ. ದೇಣಿಗೆಯನ್ನು ವಿಜಯ್ ನೀಡಿದ್ದಾರೆ. ಈ ಕುರಿತು ವಿಶಾಲ್ (Vishal) ಸಾಮಾಜಿಕ ಜಾಲತಾಣದಲ್ಲಿ ವಿಜಯ್ ನಡೆಗೆ ಶ್ಲಾಘಿಸಿದ್ದಾರೆ. ಇದನ್ನೂ ಓದಿ:ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾಗಿಂತ ಮುಂಚೆ ಸಲಾರ್ 2

‘ನಡಿಗರ್ ಸಂಘಂ’ ಕಟ್ಟಡದ ಕೆಲಸಕ್ಕೆ 1 ಕೋಟಿ ದೇಣಿಗೆ ನೀಡಿದ ನನ್ನ ನೆಚ್ಚಿನ ಸಹೋದರ ವಿಜಯ್‌ಗೆ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಬರೆದುಕೊಂಡಿದ್ದಾರೆ. ಈ ಸಂಘಕ್ಕೆ ವಿಶಾಲ್ ಅಧ್ಯಕ್ಷರಾಗಿದ್ದಾರೆ. ವಿಜಯ್ ಜೊತೆಗಿನ ಫೋಟೋ ಶೇರ್ ಮಾಡಿ ವಿಶಾಲ್ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಗೋವಾದಲ್ಲಿ ಯಶ್ : ಸದ್ದಿಲ್ಲದೇ ಶುರುವಾಯ್ತಾ ‘ಟಾಕ್ಸಿಕ್’ ಶೂಟಿಂಗ್

ವಿಜಯ್ ನಟನೆಯ ಕಡೆಯ 2 ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಇದೆ. ವೆಂಕಟ್ ಪ್ರಭು ಜೊತೆ ವಿಜಯ್ ಸಿನಿಮಾ ಮಾಡ್ತಿದ್ದಾರೆ. ವಿಜಯ್ 69ನೇ ಸಿನಿಮಾಗೆ ಜವಾನ್ ಡೈರೆಕ್ಟರ್ ಅಟ್ಲೀ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಈ ಸಿನಿಮಾಗೆ ಸಮಂತಾ ನಾಯಕಿಯಾಗಿ ನಟಿಸಲಿದ್ದಾರೆ.

Share This Article