ಚೆನ್ನೈ: ತಮಿಳಿನ ಖ್ಯಾತ ನಟ ದಳಪತಿ ವಿಜಯ್ ತಂದೆ-ತಾಯಿ ಸೇರಿ 11 ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಸದ್ಯ, ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.
Advertisement
ವಿಜಯ್ ತಂದೆ ಖ್ಯಾತ ನಿರ್ದೇಶಕ ಎಸ್.ಎ. ಚಂದ್ರಶೇಖರ್. ಇವರು ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ವಿಜಯ್ ತಂದೆ 2020ರಲ್ಲಿ ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಮ್ ಪಕ್ಷ ಆರಂಭಿಸಿದ್ದರು. ಆದರೆ ಅದು ವಿಜಯ್‍ಗೆ ಇಷ್ಟವಿಲ್ಲ. ನನ್ನ ತಂದೆಯ ಪಕ್ಷ ಎಂದು ಸಫೋರ್ಟ್ ಮಾಡಬೇಡಿ. ಆ ಪಕ್ಷದ ಜೊತೆಗೆ ನೇರವಾಗಿ, ಪರೋಕ್ಷವಾಗಿ ಯಾವುದೇ ಸಂಬಂಧವಿಲ್ಲ. ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಮ್ ಪಾರ್ಟಿ ಜೊತೆಗೆ ನನ್ನ ಹೆಸರು ಸೇರಿಸಿದರೆ, ಫೋಟೋ ಬಳಸಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಇದು ದೊಡ್ಡಮಟ್ಟದ ಸುದ್ದಿಯಾಗಿತ್ತು. ಇದೀಗ ಆ ಬಗ್ಗೆಯೇ ಪ್ರಕರಣ ದಾಖಲು ಮಾಡಲಾಗಿದೆ. ವಿಜಯ್ ಹೆಸರು, ಅಭಿಮಾನಿಗಳ ಸಂಘಗಳ ಹೆಸರನ್ನು ಎಲ್ಲಿಯೂ ಬಳಸದಂತೆ ತಡೆಯಾಜ್ಞೆ ತರಲಾಗಿದೆ. ಇದನ್ನೂ ಓದಿ: ಭಾರತದ ಬಯೋಟೆಕ್ ರಾಜಧಾನಿ ಬೆಂಗಳೂರು: ಪಿಯೂಷ್ ಗೋಯಲ್
Advertisement
Official statement from #ThalapathyVijay‘s Side!!!#Thalapathy @actorvijay @BussyAnand @Jagadishbliss @V4umedia_ pic.twitter.com/z7hz7ywpin
— RIAZ K AHMED (@RIAZtheboss) November 5, 2020
Advertisement
ಈ ಸಂಬಂಧ ವಿಜಯ್ ತಂದೆ ಎಸ್.ಎ. ಚಂದ್ರಶೇಖರ್, ತಾಯಿ ಶೋಭಾ ಚಂದ್ರಶೇಖರ್, ಪಾರ್ಟಿ ಲೀಡರ್ ಪದ್ಮನಾಭನ್ ಸೇರಿದಂತೆ 11 ಜನರ ವಿರುದ್ಧ ಪ್ರಕರಣದ ದಾಖಲಾಗಿದೆ. ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಮ್ ಪಾರ್ಟಿಗೆ ಎಸ್.ಎ. ಚಂದ್ರಶೇಖರ್ ಅವರು ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ತಾಯಿ ಶೋಭಾ ಚಂದ್ರಶೇಖರ್ ಅವರು ಖಜಾಂಚಿ ಆಗಿದ್ದಾರೆ. ಇದನ್ನೂ ಓದಿ: ಬಾಲಕಿ ಕೆನ್ನೆ ಕಚ್ಚಿದ್ದ ಶಿಕ್ಷಕನಿಗೆ ಪೊಲೀಸರ ಮುಂದೆಯೇ ಥಳಿಸಿದ ಸ್ಥಳೀಯರು
Advertisement
ಇದು ವಿಜಯ್ ಅವರ ರಾಜಕೀಯ ಪಕ್ಷವಲ್ಲ. ಈ ಪಕ್ಷದೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲ. ಅಂದು ವಿಜಯ್‍ಗೆ ಅಭಿಮಾನಿ ಸಂಘ ಕಟ್ಟಲು ಅವರ ಯಾವುದೇ ಅನುಮತಿ ಪಡೆಯಲಿಲ್ಲ. ಅದೇ ರೀತಿ ಈಗಲೂ ರಾಜಕೀಯ ಪಕ್ಷ ಸ್ಥಾಪನೆಗೆ ವಿಜಯ್ ಅನುಮತಿ ಬೇಕಿಲ್ಲ ಎಂದು ಚಂದ್ರಶೇಖರ್ ವಾದ ಮಾಡಿದ್ದರು ಎಂಬ ಮಾತು ಕೇಳಿಬಂದಿತ್ತು. ಇದನ್ನೂ ಓದಿ: ಲಸಿಕೆ ವಿತರಣೆ ದಾಖಲೆ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ
ಈ ಎಲ್ಲ ವಿಚಾರವಾಗಿ ಬೇಸತ್ತ ವಿಜಯ್ ನನ್ನ ತಂದೆ ನೀಡಿರುವ ರಾಜಕೀಯ ಹೇಳಿಕೆಗಳೊಂದಿಗೆ ನನಗೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಸಂಬಂಧವಿಲ್ಲ ಎಂದು ವಿಜಯ್ ಹೇಳಿದ್ದರು. ಪಕ್ಷಕ್ಕೆ ವಿಜಯ್ ಹೆಸರಿದೆ ಎಂಬ ಕಾರಣಕ್ಕೆ ಅವರ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಆಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ವಿಜಯ್ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.