ಕೊಲೆ ಯತ್ನದ ಕೇಸ್‌ನಲ್ಲಿ ನಟ ತಾಂಡವ್ ರಾಮ್ ಅರೆಸ್ಟ್

Public TV
1 Min Read
thandav ram 1

‘ಜೋಡಿಹಕ್ಕಿ’ ಸೀರಿಯಲ್ ಖ್ಯಾತಿಯ ನಟ ತಾಂಡವ್ ರಾಮ್ (Thandav Ram) ಕೊಲೆ ಯತ್ನದ ಕೇಸ್‌ನಲ್ಲಿ ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ. ‘ದೇವನಾಂಪ್ರಿಯ’ ಸಿನಿಮಾ ಅರ್ಧಕ್ಕೆ ನಿಂತಿದ್ದಕ್ಕೆ ನಿರ್ದೇಶಕ ಭರತ್ (Director Bharath) ಮೇಲೆ ತಾಂಡವ್ ಗುಂಡು ಹಾರಿಸಿದ್ದಕ್ಕೆ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಇದನ್ನೂ ಓದಿ:BBK 11: ಧರ್ಮ ಐ ಲೈಕ್ ಯೂ ಎಂದ ಶೋಭಾ ಶೆಟ್ಟಿ

thandav ram

‘ದೇವನಾಂಪ್ರಿಯ’ ಸಿನಿಮಾದಲ್ಲಿ ತಾಂಡವ್ ರಾಮ್ ನಾಯಕ ನಟನಾಗಿ ನಟಿಸುತ್ತಿದ್ದರು. ಕಾರಣಾಂತರಗಳಿಂದ ‘ದೇವನಾಂಪ್ರಿಯ’ ಸಿನಿಮಾದ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಈ ಹಿನ್ನೆಲೆ ಚಂದ್ರಲೇಔಟ್‌ನ ಕಚೇರಿಯಲ್ಲಿ ಸಿನಿಮಾಗೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿತ್ತು. ಆಗ ತಾಂಡವ್‌ಗೂ ಚಿತ್ರದ ನಿರ್ದೇಶಕ ಭರತ್‌ಗೂ ವಾಗ್ವಾದ ನಡೆದಿದೆ. ಈ ವೇಳೆ, ಸಿಟ್ಟಿನಿಂದ ಗನ್ ತೆಗೆದು ಭರತ್ ಮೇಲೆ ತಾಂಡವ್ ಗುಂಡು ಹಾರಿಸಿದ್ದಾರೆ.

thandav ram 1

ಅದೃಷ್ಟವಶಾತ್ ಗುಂಡು ಡೈರೆಕ್ಟರ್ ಭರತ್‌ಗೆ ತಗುಲದೆ ಗೋಡೆಗೆ ಬಿದ್ದಿದೆ. ಇದೀಗ ಭರತ್ ದೂರಿನ ಮೇರೆಗೆ ನಟ ತಾಂಡವ್ ಅವರನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಅಂದಹಾಗೆ, ಒಂದು ಕಥೆ ಹೇಳ್ಲಾ, ಜೋಡಿಹಕ್ಕಿ ಸೀರಿಯಲ್, ಭೂಮಿಗೆ ಬಂದ ಭಗವಂತ ಸೀರಿಯಲ್‌ನಲ್ಲಿ ತಾಂಡವ್ ರಾಮ್ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದರು.

Share This Article