ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ಚೆಂಗಪ್ಪ ಫ್ಯಾಮಿಲಿ ಜೊತೆಗೆ ಸಖತ್ ಎಂಜಾಯ್ ಮಾಡಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಶ್ವೇತಾ ಚೆಂಗಪ್ಪ ತಮ್ಮ ಬ್ಯೂಸಿ ಶೆಡ್ಯೂಲ್ಗಳ ಮಧ್ಯೆ ಫ್ಯಾಮಿಲಿಗೂ ಕೂಡ ಅಷ್ಟೇ ಸಮಯವನ್ನು ಮೀಸಲಿಡುತ್ತಾರೆ. ತಮ್ಮ ನಟನೆ ಮೂಲಕವೇ ಕನ್ನಡಿಗರ ಮನೆಮಾತಾಗಿರುವ ಶ್ವೇತಾ ಚೆಂಗಪ್ಪ ಕಂಡರೆ ಫ್ಯಾಮಿಲಿಗೂ ಕೂಡ ಅಷ್ಟೇ ಅಚ್ಚು ಮೆಚ್ಚು. ಇತ್ತೀಚೆಗಷ್ಟೇ ಸ್ನೇಹಿತರೊಂದಿಗೆ ಟ್ರಿಪ್ ಹೊಡೆದಿದ್ದ ಅವರು ಇದೀಗ ಪತಿ, ಮಗ ಹಾಗೂ ತಾಯಿ ಸೇರಿದಂತೆ ಫ್ಯಾಮಿಲಿಯ ಇತರ ಸದಸ್ಯರೊಂದಿಗೆ ಎಂಜಾಯ್ ಮಾಡಿರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಶ್ವೇತಾ ಚೆಂಗಪ್ಪ ಫ್ಯಾಮಿಲಿ ಜೊತೆ ರೆಸಾರ್ಟ್ ಒಂದರಲ್ಲಿ ಕಾಲ ಕಳೆದಿದ್ದು, ಸಮುದ್ರದ ನೀರಿನಲ್ಲಿ ಆಟ ಆಡಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಫೋಟೋ ಜೊತೆಗೆ ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯುವುದು ತುಂಬಾ ಅವಶ್ಯಕ, ಏಕೆಂದರೆ ನಾಳೆ ಎಂಬುದು ಎಂದಿಗೂ ಭರವಸೆ ನೀಡುವುದಿಲ್ಲ. ಅಷ್ಟೇ ಅಲ್ಲ, ಯಾವುದೇ ಹಣ ಅಥವಾ ಯಶಸ್ಸು ನಿಮ್ಮ ಕುಟುಂಬದವರ ಸ್ಥಾನ ತುಂಬುವುದಿಲ್ಲ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸ್ನೇಹಿತರೊಂದಿಗೆ ಶ್ವೇತಾ ಚೆಂಗಪ್ಪ ಮೋಜು, ಮಸ್ತಿ – ಫೋಟೋ ವೈರಲ್
ಇತ್ತೇಚೆಗಷ್ಟೇ ಶ್ವೇತಾ ಚೆಂಗಪ್ಪ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ತಂಡದ ಸದಸ್ಯರೊಂದಿಗೆ ಚಾಂಮುಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಅಲ್ಲದೇ ನಟ ಮಂಡ್ಯ ರಮೇಶ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಸೆಲ್ಫಿಕ್ಲಿಕ್ಕಿಸಿಕೊಂಡಿದ್ದರು ಮತ್ತು ಸ್ನೇಹಿತೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡಿದ್ದರು.