‘ಗದರ್ 2′ (Gadar 2) ಸಕ್ಸಸ್ ನಂತರ ಸನ್ನಿ ಡಿಯೋಲ್‌ಗೆ (Sunny Deol) ಭರ್ಜರಿ ಆಫರ್ಸ್ ಬರುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೀಗ ಮುಂದಿನ 2024ರ ಚುನಾವಣೆ ಬಗ್ಗೆ ಮಾತನಾಡಿದ್ದಾರೆ. ರಾಜಕೀಯ ರಂಗದ ವಿಚಾರವಾಗಿ ತಮ್ಮ ನಿಲುವೇನು? ಎಂದು ಮಾತನಾಡಿದ್ದಾರೆ.
ಸಂಸತ್ತಿನಲ್ಲಿ ಹಾಜರಿ ಕಡಿಮೆ ಇರುವುದು ಮತ್ತು 2024ರ ಚುನಾವಣೆ (Politics) ಬಗ್ಗೆ ನಟ ಸನ್ನಿ ಡಿಯೋಲ್‌ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಅವರು ನೇರವಾಗಿ ಉತ್ತರಿಸಿದ್ದಾರೆ. ಸಂಸತ್ತಿಗೆ ಹೋಗೋದು ನಿಜವಾಗಿಯೂ ಕಡಿಮೆಯಾಗಿದೆ. ನಾನು ರಾಜಕೀಯಕ್ಕೆ ಬಂದಾಗ, ಇದು ನನ್ನ ಪ್ರಪಂಚವಲ್ಲ ಎಂದು ನಾನು ಅರಿತುಕೊಂಡೆ ಎಂದಿದ್ದಾರೆ.
ನಾನು ನನ್ನ ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಅದನ್ನು ಮಾಡುತ್ತೇನೆ. ಒಂದೊಮ್ಮೆ ನಾನು ಸಂಸತ್ತಿಗೆ ಹೋದರೂ, ಹೋಗದಿದ್ದರೂ ಅದು ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸದ ಮೇಲೆ ಪರಿಣಾಮ ಬೀರುವುದಿಲ್ಲ. ನಾನು ಸಂಸತ್ತಿಗೆ ಹೋದಾಗ ಸಮಸ್ಯೆಗಳನ್ನು ಎದುರಿಸುತ್ತೇನೆ. ನಟನಾಗಿ ನೀವು ಎಲ್ಲಿಗೆ ಹೋದರೂ ಜನರು ನಿಮ್ಮನ್ನು ಗುರುತಿಸುತ್ತಾರೆ. ಪ್ರೀತಿಯಿಂದ ಮಾತನಾಡಿಸುತ್ತಾರೆ. ನನ್ನ ಕ್ಷೇತ್ರಕ್ಕೆ ನಾನು ಮಾಡಿದ ಕೆಲಸಗಳ ಪಟ್ಟಿ ನನ್ನ ಬಳಿ ಇದೆ. ಮಾಡಿದ ಕೆಲಸವನ್ನು ಪ್ರಚಾರ ಮಾಡುವುದರಲ್ಲಿ ನನಗೆ ಆಸಕ್ತಿ ಇಲ್ಲ. ರಾಜಕೀಯ ನನಗೆ ಸರಿಹೊಂದದ ವೃತ್ತಿ ಎಂದಿದ್ದಾರೆ. ಇದನ್ನೂ ಓದಿ:ಅಮೆರಿಕಾದಲ್ಲಿ ‘ಮೈ ಹೀರೋ’ ಶೂಟಿಂಗ್ : ಹಾಲಿವುಡ್ ನಟ ಎರಿಕ್ ಭಾಗಿ
2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರೇ ಎಂದು ಎದುರಾದ ಪ್ರಶ್ನೆಗೆ ನಾಜುಕಾಗಿ ನಟ ಉತ್ತರಿಸಿದ್ದಾರೆ. ಅದಕ್ಕೆ ಇಲ್ಲ ಎನ್ನುವ ಉತ್ತರ ಬಂದಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಿಮ್ಮ ಬಳಿ ಸ್ಪರ್ಧೆ ಮಾಡುವಂತೆ ಕೇಳಿದರೆ ಏನು ಮಾಡುತ್ತೀರಿ ಎಂದೂ ಕೇಳಲಾಯಿತು. ಸಿನಿಮಾ ಮೂಲಕ ನಾನು ದೇಶ ಸೇವೆ ಮಾಡುತ್ತಿದ್ದೇನೆ ಎಂಬುದು ಮೋದಿ ಅವರಿಗೂ ತಿಳಿದಿದೆ ಎಂದಿದ್ದಾರೆ. ಈ ಮೂಲಕ ನನಗೆ ರಾಜಕೀಯ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.