ಟೊಮ್ಯಾಟೋ ವಿಚಾರದಲ್ಲಿ ಕ್ಷಮೆ ಕೇಳಿದ ನಟ ಸುನೀಲ್ ಶೆಟ್ಟಿ

Public TV
2 Min Read
Sunil Shetty 1

ಗನಕ್ಕೇರಿದ ಟೊಮ್ಯಾಟೋ ಬೆಲೆ ಕುರಿತಾಗಿ ಈ ಹಿಂದೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿಕೆಯೊಂದನ್ನು ನೀಡಿದ್ದರು. ‘ಟೊಮ್ಯಾಟೋ ಬೆಲೆ ಕೇಳಿದ್ಮೇಲೆ ಊಟದಲ್ಲಿ ಟೊಮ್ಯಾಟೋ ತಿನ್ನುವುದನ್ನು ಕಡಿಮೆ ಮಾಡಿದ್ದೇನೆ’ ಎನ್ನುವ ಮಾತುಗಳನ್ನು ಆಡಿದ್ದರು. ಆ ನಂತರ ಅನೇಕರು ಇವರ ಮಾತಿಗೆ ವಿರೋಧಿಸಿದ್ದರು. ಟ್ರೋಲ್ ಕೂಡ ಮಾಡಿದ್ದರು.

Sunil Shetty 2

ಸುನೀಲ್ ಶೆಟ್ಟಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಟೊಮ್ಯಾಟೋ ಬೆಲೆಯಿಂದ ರೈತರಿಗೆ ಲಾಭವಾಗಿದೆ. ಇವರು ರೈತ ವಿರೋಧಿ. ರೈತರಿಗೆ ಕೊಂಚ ಸಹಾಯವಾಗುತ್ತದೆ ಎಂದರೆ, ಇವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಅನೇಕರು ಟೀಕಿಸಿದ್ದರು. ಈ ಕುರಿತು ಸುನೀಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

Sunil Shetty 2 1

ನಾನು ಕೂಡ ರೈತ ಕುಟುಂಬದಿಂದ ಬಂದವನು. ರೈತನ ಕಷ್ಟ ನಷ್ಟಗಳು ನನಗೆ ಗೊತ್ತಿದೆ. ನಾನು ರೈತ ವಿರೋಧಿ ಮಾತುಗಳನ್ನು ಆಡಿಲ್ಲ. ನನಗೂ ರೈತನ ಬಗ್ಗೆ ಕಾಳಜಿ ಇದೆ. ನನ್ನ ಮಾತುಗಳಿಂದ ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದು ಅವರು ಹೇಳಿಕೊಂಡಿದ್ದಾರೆ.  ತಮಗೂ ರೈತರ ಬಗ್ಗೆ ಕಾಳಜಿ ಇರುವ ಕುರಿತು ಮಾತನಾಡಿದ್ದಾರೆ.

Sunil Shetty 1 1

ಏನಿದು ವಿವಾದ?

ದೇಶದಾದ್ಯಂತ ಟೊಮ್ಯಾಟೋ (Tomato) ಬೆಲೆ ಏರಿ ಕೂತಿದೆ. ಇದು ಮಧ್ಯಮ ಮತ್ತು ಕೆಳಮಧ್ಯಮ ವರ್ಗಕ್ಕೆ ಮಾತ್ರ ತಲೆಬಿಸಿ ತಂದಿಲ್ಲ, ಶ್ರೀಮಂತರು ಕೂಡ ಟೊಮ್ಯಾಟೋ ಬಗ್ಗೆ ಮಾತನಾಡುವಂತಾಗಿದೆ. ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿರುವ ಬಾಲಿವುಡ್ (Bollywood) ನಟ ಸುನೀಲ್ ಶೆಟ್ಟಿ (Sunil Shetty) ಟೊಮ್ಯಾಟೋ ಬೆಲೆ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಅಪಘಾತದಿಂದ ಚೇತರಿಸಿಕೊಂಡ್ರಾ ಸಾಯಿ ಧರಂ ತೇಜ್- ನಟ ಹೇಳೋದೇನು?

Sunil Shetty 3

ನನ್ನ ಮನೆಯಲ್ಲಿ ಯಾವಾಗಲೂ ನಾವು ತಾಜಾ ತರಕಾರಿಯನ್ನೇ ತಂದು ಬಳಸುತ್ತೇವೆ. ದಿನಕ್ಕೆ ಎರಡ್ಮೂರು ರೀತಿಯ ತರಕಾರಿಗಳನ್ನು ನನ್ನ ಪತ್ನಿ ಖರೀದಿಸುತ್ತಾರೆ. ಅದರಲ್ಲೂ ಇತ್ತೀಚೆಗೆ ಟೊಮ್ಯಾಟೋ ದರ ಗಗನಕ್ಕೇರಿದೆ. ಹಾಗಾಗಿ ನಾನು ಟೊಮ್ಯಾಟೋ ತಿನ್ನುವುದನ್ನು ಕಡಿಮೆ ಮಾಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

 

ಟೊಮ್ಯಾಟೋ ದರ ಏರಿಕೆಯಾಗುತ್ತಿದ್ದಂತೆಯೇ ಹಲವರು ಹಲವು ರೀತಿಯ ಪ್ರಯೋಗಗಳನ್ನು ಅಡುಗೆಯಲ್ಲಿ ಮಾಡುತ್ತಿದ್ದಾರೆ. ಅಲ್ಲದೇ, ತಮ್ಮ ಮನೆಯಲ್ಲೇ ಟೊಮ್ಯಾಟೋ ಬೆಳೆಯುವುದು ಹೇಗೆ ಎನ್ನುವುದನ್ನು ನಟಿ ರಾಖಿ ಸಾವಂತ್ ಹೇಳಿದ್ದರು. ಹದಿನೈದು ದಿನದ ಒಳಗೆ ಟೊಮ್ಯಾಟೋ ಬೆಳೆಯುವುದು ಹೇಗೆ ಎನ್ನುವುದನ್ನು ತೋರಿಸಿಕೊಟ್ಟಿದ್ದರು. ಆ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article