ಬಾಲಿವುಡ್ ನಟಿ ಅಥಿಯಾ ಶೆಟ್ಟಿ (Athiya Shetty) ಮತ್ತು ಕೆ.ಎಲ್ ರಾಹುಲ್ (K.L Rahul) ಮಾ.24ರಂದು ಹೆಣ್ಣು ಮಗುವನ್ನು ಬರಮಾಡಿಕೊಂಡಿರುವ ಖುಷಿಯಲ್ಲಿದ್ದಾರೆ. ಈ ಹಿನ್ನೆಲೆ ಮೊಮ್ಮಗಳ ಬಗ್ಗೆ ಸುನೀಲ್ ಶೆಟ್ಟಿ (Suniel Shetty) ಭಾವನ್ಮಾತಕವಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಬ್ಯಾಂಕ್ ಜನಾರ್ಧನ್ ಸಾವಿನ ಸುದ್ದಿ ಕೇಳಿ ಶಾಕ್ ಆಯ್ತು: ಧ್ರುವ ಸರ್ಜಾ

View this post on Instagram
ಇತ್ತೀಚೆಗೆ ನಾನು ಅಜ್ಜನಾಗಿರೋದು ನನಗೆ ವರ್ಣಿಸಲಾಗದ ಒಂದು ಭಾವನೆ, ಅದೊಂದು ಖುಷಿ. ವ್ಯವಹಾರ, ನಟನೆ, ನಿರ್ಮಾಣವನ್ನು ಅರ್ಥಪೂರ್ಣವಾಗಿ ಮಾಡಲು ಪ್ರಯತ್ನಿಸಿದ್ದೇನೆ. ಇದರ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ನಾನು ನನ್ನ ಮೊಮ್ಮಗಳನ್ನು ಎತ್ತಿಕೊಂಡಾಗ ಯಾವುದು ಮುಖ್ಯವಲ್ಲ ಎನಿಸುತ್ತದೆ. ಜೀವನದಲ್ಲಿ ನಿಜವಾಗಿಯೂ ಮುಖ್ಯವಾದುದನ್ನು ಅರಿತುಕೊಳ್ಳುವ ಹಂತಕ್ಕೆ ಬಂದಾಗ ಹೆಚ್ಚಿನ ರೀತಿಯ ಅನುಭವಗಳು ಆಗುತ್ತವೆ. ಮೊಮ್ಮಗಳನ್ನು ನನ್ನ ತೋಳಿನಲ್ಲಿ ಹಿಡಿದುಕೊಳ್ಳುವುದು ಸುಂದರ ಕ್ಷಣವಾಗಿದೆ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ. ಈ ವೇಳೆ, ಮಂಗಳೂರಿನಲ್ಲಿ ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ್ದಾರೆ. ಬೇಸಿಗೆಯಲ್ಲಿ ಬರಿಗಾಲಿನಲ್ಲಿ ಓಡುವುದು, ಬಯಲು ಪ್ರದೇಶದಲ್ಲಿ ಆಟವಾಡುವುದು. ಮನೆಯಲ್ಲಿ ತಯಾರಿಸಿದ ತಿಂಡಿಯನ್ನು ತಿಂದಿರುವ ಬಗ್ಗೆ ಅವರು ನೆನೆಪಿಸಿಕೊಂಡಿದ್ದಾರೆ. ಜೀವನದಲ್ಲಿ ನಾನು ಸಾಧಿಸಲು ಇನ್ನೂ ಬಹಳಷ್ಟಿದೆ. ಆದರೆ ಅದು ನನ್ನ ಒಂದು ಭಾಗ ಮಾತ್ರ. ನನ್ನ ಹೃದಯಕ್ಕೆ ಹತ್ತಿರವಾದದ್ದು ಏನು ಎಂಬುದರ ಬಗ್ಗೆ ನನಗೆ ಈಗ ಸ್ಪಷ್ಟವಾಗಿದೆ ಎಂದಿದ್ದಾರೆ.
ಇನ್ನೂ ಈ ಪುಟ್ಟ ಹುಡುಗಿ ನನ್ನ ತೋಳುಗಳಲ್ಲಿ ಇದ್ದಾಳೆ. ನನ್ನ ಮಗಳು ಅಥಿಯಾ ತನ್ನ ಜೀವನದ ಅತ್ಯಂತ ತೃಪ್ತಿಕರ ಪಾತ್ರಕ್ಕೆ ಪರಿವರ್ತನೆಗೊಳ್ಳುವುದನ್ನು ನೋಡಿ ನಾನು ಹಗುರವಾಗಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ ಸುನೀಲ್ ಶೆಟ್ಟಿ.


