CinemaCrimeKarnatakaLatestLeading NewsMain PostSouth cinema

ಮಾನಸಿಕ ಖಿನ್ನತೆಯೇ ನಟ ಸುಧೀರ್ ಆತ್ಮಹತ್ಯೆಗೆ ಕಾರಣ

ನಿನ್ನೆಯಷ್ಟೇ ತೆಲುಗಿನ ಯುವನಟ ಸುಧೀರ್ ವರ್ಮಾ (Sudhir Verma) ಆತ್ಮಹತ್ಯೆಗೆ (Suicide) ಶರಣಾಗಿದ್ದರು. ಸುಂದರವಾದ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದ ಈ ನಟ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಸಹಜವಾಗಿ ಸಿನಿಮಾ ರಂಗವನ್ನು ದಿಗಿಲು ಮೂಡಿಸಿತ್ತು. ಸುಧೀರ್ ಸಾವಿಗೆ ಶರಣಾಗಲು ಕಾರಣವೇನು ಎನ್ನುವ ಚರ್ಚೆ ಕೂಡ ನಡೆದಿತ್ತು. ಈ ನಟನನ್ನು ಹತ್ತಿರದಿಂದ ಬಲ್ಲವರು ಹೇಳುವ ಪ್ರಕಾರ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ. ಅವಕಾಶಕ್ಕಾಗಿ ಅಲೆಯುತ್ತಿದ್ದವರಿಗೆ ಸೂಕ್ತ ಮನ್ನಣೆ ಸಿಗದೇ ಇರುವ ಕಾರಣದಿಂದಾಗಿ ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇವರು ಮೆಗಾಸ್ಟಾರ್ ಚಿರಂಜೀವಿ (Chiranjeevi) ಪುತ್ರಿ ಸುಷ್ಮಿತಾ ನಿರ್ಮಾಣದಲ್ಲಿ ಮೂಡಿ ಬಂದಿದ್ದ ‘ಶೂಟೌಟ್’ (Shootout) ವೆಬ್ ಸಿರೀಸ್ ನಲ್ಲಿ ನಟಿಸಿದ್ದರು. ಅಲ್ಲದೇ ‘ಸೆಕೆಂಡ್ ಹ್ಯಾಂಡ್’ ಸಿನಿಮಾದ ಮೂಲಕ ತೆಲುಗು ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿದ್ದರು. ನಂತರ ಅವಕಾಶಕ್ಕಾಗಿ ಅಲೆಯುತ್ತಿದ್ದರು. ಅಂದುಕೊಂಡಿದ್ದು ಆಗದೇ ಇರುವ ಕಾರಣಕ್ಕಾಗಿ ಅವರು ತಮ್ಮ ವೈಜಾಗ್ ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿಚಿತ್ರರಂಗ ನನ್ನ ಸ್ವತ್ತಲ್ಲ, ಕೆಸಿಸಿಗೆ ಎಲ್ಲರಿಗೂ ಆಹ್ವಾನವಿದೆ: ಕಿಚ್ಚ ಸುದೀಪ್

ಸುಧೀರ್ ನಿಧನದ ಸುದ್ದಿ ಹರಡುತ್ತಿದ್ದಂತೆಯೇ ಅವರ ಮನೆಗೆ ಧಾವಿಸಿರುವ ಅನೇಕ ಕಲಾವಿದರು, ಸುಧೀರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಸೆಕೆಂಡ್ ಹ್ಯಾಂಡ್, ಕುಂದನಪು ಬೊಮ್ಮ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದ ಸುಧೀರ್, ಎರಡೂ ಚಿತ್ರಗಳ ಮೂಲಕ ಒಳ್ಳೆಯ ಹೆಸರನ್ನು ಸಂಪಾದಿಸಿದ್ದರು. ಆದರೆ, ಹೇಳಿಕೊಳ್ಳುವಂತಹ ಅವಕಾಶ ಅವರಿಗೆ ಸಿಗಲಿಲ್ಲ. ಹಾಗಾಗಿ ಅವರು ಮಾನಸಿಕ ಖಿನ್ನತೆಗೂ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಜ್ಯೂನಿಯರ್ ಆರ್ಟಿಸ್ಟ್ ಆಗಿ ಸಿನಿಮಾ ರಂಗಕ್ಕೆ ಬಂದವರು, ನಂತರ ಕಷ್ಟಪಟ್ಟು ನಾಯಕನ ಸ್ಥಾನ ಏರಿದ್ದರು.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button