ಕನ್ನಡದ ‘ಎರಡನೇ ಸಲ’ ಸಿನಿಮಾದ ನಾಯಕಿ ಸಂಗೀತಾ ಭಟ್ (Sangeetha Bhat) ಅವರು 31ನೇ ವರ್ಷದ ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದಾರೆ. ಪತ್ನಿ ಸಂಗೀತಾಗೆ ‘ಭಾಗ್ಯಲಕ್ಷ್ಮಿʼ (Bhagyalakshmi) ಸೀರಿಯಲ್ ಖ್ಯಾತಿಯ ಸುದರ್ಶನ್ ಅವರು ವಿಶ್ ಮಾಡೋದರ ಜೊತೆಗೆ ಕಾಲೆಳೆದಿದ್ದಾರೆ. ನಟನ ಪೋಸ್ಟ್ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಸ್ಯಾಂಡಲ್‌ವುಡ್‌ನಲ್ಲಿ ಎರಡನೇ ಸಲ, ಅನುಕ್ತ, ಆದ್ಯ, ರೂಪಾಂತರ, ದಯವಿಟ್ಟು ಗಮನಿಸಿ, ಮಾಮು ಟೀ ಅಂಗಡಿ, ಕಾಕಿ, ಕಿಸ್ಮತ್ ಮುಂತಾದ ಸಿನಿಮಾಗಳಲ್ಲಿ ಸಂಗೀತಾ ಭಟ್ ಅವರು ನಟಿಸಿದ್ದಾರೆ. ಚಿತ್ರರಂಗದಿಂದ ಒಂದಷ್ಟು ವರ್ಷಗಳ ಕಾಲ ಬ್ರೇಕ್ ಪಡೆದಿದ್ದ ಸಂಗೀತಾ ಭಟ್ ಅವರು ಈಗ ಅಂಕಿತಾ ಅಮರ್ ನಟನೆಯ ‘ಅಬ ಜಬ ದಬ’ ಸಿನಿಮಾದಲ್ಲಿಯೂ ಸಂಗೀತಾ ಭಟ್ ನಟಿಸುತ್ತಿದ್ದಾರೆ. ಇನ್ನು ‘ಕ್ಲಾಂತ’ ಎನ್ನುವ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ. ಇದನ್ನೂ ಓದಿ:ಕೋಮಲ್ ಹುಟ್ಟುಹಬ್ಬಕ್ಕೆ ‘ಯಲಾ ಕುನ್ನಿ’ ಫಸ್ಟ್ ಲುಕ್
ನಟನೆಗೆ ಮತ್ತೆ ಕಂಬ್ಯಾಕ್ ಆಗಿರುವ ನಟಿ ಸಂಗೀತಾಗೆ ಪತಿ ಸುದರ್ಶನ್ (Sudarshan)ವಿಶ್ ಮಾಡಿರುವ ರೀತಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹ್ಯಾಪಿ ಬರ್ತ್‌ಡೇ ಸಂಗೀತಾ ಭಟ್. ನಿನಗೆ ಈಗ 31 ವರ್ಷ ಅಂತ ನಾನು ಯಾರಿಗೂ ಹೇಳೋದಿಲ್ಲ. ನೀನು ಆಂಟಿಯಾಗಿ ಒಂದು ವರ್ಷ ಅನುಭವವಿದೆ ಎಂದು ಸಂಗೀತಾ ಭಟ್ ಅವರಿಗೆ ಸುದರ್ಶನ್ ವಿಶ್ ಮಾಡಿದ್ದಾರೆ. ಅದಕ್ಕೆ ನಟಿ ಕೂಡ ಪ್ರತಿಕ್ರಿಯೆ ನೀಡಿ, ನಿಮ್ಮ ನಿಜವಾದ ವಯಸ್ಸು ಹೇಳೋದಾ ನಾನು ಎಂದು ಪತಿಗೆ ಕಾಲೆಳೆದಿದ್ದಾರೆ.
ಸಂಗೀತಾ- ಸುದರ್ಶನ್ ಅವರು ಪ್ರೀತಿಸಿ ಮದುವೆಯಾದ ಜೋಡಿ, ಪ್ರೀತಿಯ ವಿಷಯವನ್ನ ತಮ್ಮ ಕುಟುಂಬಕ್ಕೆ ತಿಳಿಸಿ ಗುರುಹಿರಿಯರ ಸಮ್ಮತಿಯ ಮೇರೆಗೆ ಮದುವೆಯಾದರು. ಸುದರ್ಶನ್ ಕೂಡ ‘ಭಾಗ್ಯಲಕ್ಷ್ಮಿʼ ಸೀರಿಯಲ್ ಮೂಲಕ ಪೂರ್ಣ ಪ್ರಮಾಣದ ನಟನಾಗಿ ಮಿಂಚಿದ್ದಾರೆ. ಭಾಗ್ಯಗೆ ಕಾಟ ಕೊಡುವ ಗಂಡನಾಗಿ ಕಾಣಿಸಿಕೊಂಡಿದ್ದಾರೆ.