ಶೂಟಿಂಗ್ ಮುಗಿಸಿದ ಸೃಜನ್ ಲೋಕೇಶ್ ನಿರ್ದೇಶನದ ‘ಜಿಎಸ್‌ಟಿ’ ಸಿನಿಮಾ

Public TV
1 Min Read
srujan

ಖ್ಯಾತ ನಿರೂಪಕ ಸೃಜನ್ ಲೋಕೇಶ್ (Srujan Lokesh) ನಟಿಸಿ, ನಿರ್ದೇಶನ ಮಾಡುತ್ತಿರುವ ‘ಜಿಎಸ್‌ಟಿ’ (GST Film) ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ. ಮೊದಲ ಬಾರಿಗೆ ತಾಯಿ ಗಿರಿಜಾ ಲೋಕೇಶ್‌ಗೆ ಸೃಜನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದನ್ನೂ ಓದಿ:‌’ಮೈ ಜಾನ್’ ಎಂದು ಪತ್ನಿ ಶ್ರೀದೇವಿ ಹುಟ್ಟುಹಬ್ಬಕ್ಕೆ ಬೋನಿ ಕಪೂರ್ ವಿಶ್

srujan lokesh

ನಿರೂಪಕನಾಗಿ ಎಲ್ಲರ ಮನಗೆದ್ದಿರುವ ಸೃಜನ್ ಮೊದಲ ಬಾರಿಗೆ ನಿರ್ದೇಶನದ ಕ್ಯಾಪ್ ತೊಟ್ಟಿದ್ದಾರೆ. ‘ಜಿಎಸ್‌ಟಿ’ ಸಿನಿಮಾ ಮುಲಕ ಹೊಸ ಪ್ರಯತ್ನಕ್ಕೆ ನಟ ಕೈಹಾಕಿದ್ದಾರೆ. ಸದ್ಯ ನಿರ್ಮಾಪಕ ಸಂದೇಶ್ ನಾಗಾರಾಜ್ ಅವರ ರೆಸಾರ್ಟ್‌ವೊಂದರಲ್ಲಿ ಸೃಜನ್ ಮತ್ತು ನಾಯಕಿ ರಜನಿ ನಟಿಸಿದ ಹಾಡೊಂದರ ಶೂಟಿಂಗ್ ನಡೆದಿದೆ. ಇದರ ಜೊತೆ ಸೃಜನ್, ತಬಲನಾಣಿ, ವಿನೋದ್‌ ಗೊಬ್ಬರಗಾಲ ಒಳಗೊಂಡಿರುವ ಮತ್ತೊಂದು ಸಾಂಗ್‌ ಶೂಟ್‌ ಮಾಡಲಾಗಿದೆ. ಈ ಮೂಲಕ ಚಿತ್ರದ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ.

srujan lokeshಕಾಮಿಡಿ ಜಾನರ್‌ನಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಒಂದೇ ಸಿನಿಮಾದಲ್ಲಿ ಗಿರಿಜಾ ಲೋಕೇಶ್, ಸೃಜನ್, ಸೃಜನ್ ಅವರ ಪುತ್ರ ಸುಕೃತ್ ನಟಿಸಿರೋದು ವಿಶೇಷ. ಈ ಮೂವರನ್ನು ಒಟ್ಟಿಗೆ ಚಿತ್ರದಲ್ಲಿ ನೋಡಬಹುದು. ಸದ್ಯ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿದೆ. ಇದನ್ನೂ ಓದಿ:ಟ್ರೈನಿ ವೈದ್ಯೆ ಹತ್ಯೆ ಪ್ರಕರಣ: ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದ ಆಶಿಕಾ ರಂಗನಾಥ್

ಇನ್ನೂ ಚಿತ್ರದಲ್ಲಿ ಸೃಜನ್‌ಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸಿದ್ದಾರೆ. ಗಿರಿಜಾ ಲೋಕೇಶ್, ಶರತ್ ಲೋಹಿತಾಶ್ವ, ಕಾಂತಾರ ನಟ ಪ್ರಮೋದ್ ಶೆಟ್ಟಿ, ನಿವೇದಿತಾ ಗೌಡ, ತಬಲ ನಾಣಿ, ವಿನೋದ್ ಗೊಬ್ಬರಗಾಲ, ಮಾಸ್ಟರ್ ಸುಕೃತ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ವರ್ಷದ ಅಂತ್ಯದೊಳಗೆ ಸಿನಿಮಾ ರಿಲೀಸ್ ಆಗಲಿದೆ.

Share This Article