ಮೈಸೂರು: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ‘ಮದಗಜ’ ಚಿತ್ರತಂಡ ಮೈಸೂರಿನಲ್ಲಿ ವಿಶೇಷ ಪೂಜೆಯನ್ನು ಮಾಡಿಸಿದೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮದಗಜ ಚಿತ್ರದ ಸ್ಕ್ರಿಪ್ಟ್ ಹಾಗೂ ಲಿರಿಕ್ಸ್ ಪ್ರತಿಗಳಿಗೆ ವಿಶೇಷ ಪೂಜೆ ಮಾಡಿಸಲಾಗಿದೆ. ಪೂಜೆ ಮಾಡಿಸಿದ ಬಳಿಕ ಚಿತ್ರತಂಡ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಚಿತ್ರದ ಕೆಲಸವನ್ನು ಆರಂಭಿಸಿದೆ. ರೋರಿಂಗ್ ಸ್ಟಾರ್ ಶ್ರೀಮುರುಳಿ ಮದಗಜ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ.
ಭರಾಟೆ ಚಿತ್ರದ ನಂತರ ಶ್ರೀಮುರುಳಿ ಮದಗಜ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ದಿನ ಶ್ರೀಮುರಳಿ ಅವರು ನಿರ್ದೇಶಕ, ನಿರ್ಮಾಪಕರ ಜೊತೆ ಸೇರಿ ಚಿತ್ರದ ಸ್ಕ್ರಿಪ್ಟ್ ಹಾಗೂ ಲಿರಿಕ್ಸ್ ಪೂಜೆ ಮಾಡಿಸಿದ್ದಾರೆ. ಶ್ರೀಮುರಳಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು.
ಇದೇ ವೇಳೆ ಶ್ರೀಮುರಳಿ ಮಾಧ್ಯಮದ ಜೊತೆ ಮಾತನಾಡಿ, “ಭರಾಟೆ ಚಿತ್ರದ ಚಿತ್ರೀಕರಣ ಶೇ.40 ರಷ್ಟು ನಡೆದಿದೆ. ಈಗ ಮದಗಜ ಚಿತ್ರದ ಶೂಟಿಂಗ್ ಶುರುವಾಗುತ್ತಿದೆ. ಇಂದು ಸ್ಕ್ರಿಪ್ಟ್ ಹಾಗೂ ಲಿರಿಕ್ಸ್ ಪೂಜೆ ಅಮ್ಮನ ಸನ್ನಿಧಾನದಲ್ಲಿ ನೆರೆವೇರಿಸಿದ್ದೇವೆ. ಸಂಕ್ರಾಂತಿ ಹಬ್ಬದ ದಿನ ಅಮ್ಮನ ಸನ್ನಿಧಾನದಲ್ಲಿ ಪೂಜೆ ನಡೆಯುತ್ತಿರುವುದು ಖುಷಿ ಆಗುತ್ತಿದೆ. ಚಿತ್ರದ ಔಟ್‍ಪುಟ್ ತಯಾರಿ ಆಗುವುದ್ದಕ್ಕೆ ಇನ್ನೂ ಮೂರು ತಿಂಗಳು ಬೇಕು. ಭರಾಟೆ ಸಿನಿಮಾ ಮುಗಿದ ಮೇಲೆ ಮದಗಜ ಚಿತ್ರ ಶುರುವಾಗಲಿದೆ” ಎಂದು ಹೇಳುತ್ತಾ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದರು”.
ಮದಗಜ ಚಿತ್ರವನ್ನು ‘ಅಯೋಗ್ಯ’ ಚಿತ್ರದ ಖ್ಯಾತಿಯ ನಿರ್ದೇಶಕ ಮಹೇಶ್ ನಿರ್ದೇಶನ ಮಾಡುತ್ತಿದ್ದಾರೆ. ‘ಹೆಬ್ಬುಲಿ’ ಚಿತ್ರದ ನಿರ್ಮಾಪಕ ಉಮಾಪತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv