ಬಾಲಿವುಡ್ ನಟ ಸೂರಜ್ ಪಾಂಚೋಲಿ ‘(Sooraj Pancholi) ಅವರಿಗೆ ಶೂಟಿಂಗ್‌ನಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರೀಕರಿಸುವಾಗ ಸುಟ್ಟಗಾಯಗಳಾಗಿದೆ. ಆಗಿರೋ ಗಾಯಕ್ಕೆ ನಟ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ತಂದೆ ಆದಿತ್ಯಾ ಪಾಂಚೋಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ:ಮಾತಿನ ಭರದಲ್ಲಿ ಪೂಜಾ ಹೆಗ್ಡೆ ಯಡವಟ್ಟು- ಹಿಗ್ಗಾಮುಗ್ಗಾ ಟ್ರೋಲ್ ಆದ ನಟಿ
Advertisement
ಮುಂಬೈನ ಫಿಲ್ಮ್ ಸಿಟಿಯಲ್ಲಿ ‘ಕೇಸರಿ ವೀರ್: ಲೆಜೆಂಡ್ ಆಫ್ ಸೋಮನಾಥ್’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವಾಗ ಸೂರಜ್‌ಗೆ ಗಂಭೀರ ಸುಟ್ಟ ಗಾಯಗಳಾಗಿದೆ. ಅದಕ್ಕಾಗಿ ನಟ ಇದೀಗ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಬೆಂಕಿಯ ಬಳಕೆಯನ್ನು ಒಳಗೊಂಡ ಚಿತ್ರೀಕರಣ ಇದಾಗಿದ್ದು, ಈ ವೇಳೆ ಘಟನೆ ಸಂಭವಸಿದೆ. ಚಿತ್ರೀಕರಣದ ವೇಳೆ ನಿಯಂತ್ರಣ ತಪ್ಪಿ ಸೂರಜ್‌ಗೆ ಗಾಯಗಳಾಗಿವೆ. ಸೂರಜ್‌ಗೆ ಚಿಕಿತ್ಸೆ ನಡೆಯುತ್ತಿದೆ. ಉಳಿದಂತೆ ಎಲ್ಲವೂ ಸರಿಯಾಗಿದೆ ಎಂದು ಸೂರಜ್ ತಂದೆ ಆದಿತ್ಯಾ ಪಾಂಚೋಲಿ ತಿಳಿಸಿದ್ದಾರೆ.
Advertisement
ಅಂದಹಾಗೆ, 2015ರಲ್ಲಿ ‘ಹೀರೋ’ (Hero) ಸಿನಿಮಾ ಮೂಲಕ ಸೂರಜ್ ನಾಯಕ ನಟನಾಗಿ ಎಂಟ್ರಿ ಕೊಟ್ಟರು. ಅವರಿಗೆ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ (Athiya Shetty) ಜೋಡಿಯಾಗಿ ನಟಿಸಿದ್ದರು. ಈಗ ‘ಕೇಸರಿ ವೀರ್: ಲೆಜೆಂಡ್ ಆಫ್ ಸೋಮನಾಥ್’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅವರು ಕಾಣಿಸಿಕೊಳ್ತಿದ್ದಾರೆ.