ಸಾಕಷ್ಟು ಜನಪರ ಕೆಲಸಗಳ ಮೂಲಕ ನಿಜವಾದ ಹೀರೋ ಅನಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ (Sonu Sood), ಈ ಬಾರಿ ವಿಲನ್ ರೀತಿಯಲ್ಲಿ ಬಿಂಬಿತರಾಗಿದ್ದಾರೆ. ಶೂ ಕದ್ದವನ ಪರವಾಗಿ ಮಾತನಾಡಿದ್ದಕ್ಕೆ ಸೋನು ಅವರನ್ನು ಅನೇಕರು ಟೀಕಿಸಿದ್ದಾರೆ.
ಗುರುಗ್ರಾಮ್ ದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಪಾರ್ಸಲ್ ಕೊಡಲು ಬಂದ ಮನೆಯಿಂದ ಶೂ ಕದ್ದಿದ್ದಾನೆ. ಆ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಡೆಲಿವರಿ ಬಾಯ್ ವಿರುದ್ಧ ಕ್ರಮ ತಗೆದುಕೊಳ್ಳಿ ಎಂದು ಹಲವರು ಕಾಮೆಂಟ್ ಮಾಡಿದ್ದರು. ಈ ವಿಡಿಯೋಗೆ ಸಂಬಂಧಿಸಿದಂತೆ ಸೋನು ಕಾಮೆಂಟ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸೋನು, ‘ಆ ಹುಡುಗನ ಮೇಲೆ ಯಾವುದೇ ಕ್ರಮ ಬೇಡ. ಕನಿಕರ ತೋರಿ. ಹಾಗೂ ಅವನಿಗೆ ಹೊಸ ಶೂ ಕೊಡಿಸಿ’ ಎಂದು ಅವರು ಬರೆದುಕೊಂಡಿದ್ದಾರೆ. ಕದ್ದವನ ಪರವಾಗಿ ಸೋನು ನಿಲ್ಲಬಾರದು ಎಂದು ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.