ಲಕ್ನೋ: ಮುಸ್ಲಿಂ ವ್ಯಾಪಾರಿಯೊಬ್ಬ ರೊಟ್ಟಿ ತಯಾರಿಸುವ ವೇಳೆ ಉಗುಳುವ ಕ್ರಮವನ್ನು ರಾಮ, ಶಬರಿಗೆ ಹೋಲಿಕೆ ಮಾಡಿ ಬಾಲಿವುಡ್ ನಟ ಸೋನು ಸೂದ್ (Sonu Sood) ಸಮರ್ಥಿಸಿಕೊಂಡು ಭಾರೀ ಟೀಕೆಗೆ ಗುರಿಯಾಗಿದ್ದಾರೆ.
ವ್ಯಾಪಾರಿಯೊಬ್ಬ ಗ್ರಾಹಕರಿಗೆ ರೊಟ್ಟಿಗಳನ್ನು ತಯಾರಿಸುವ ವೀಡಿಯೋವನ್ನು ನೆಟ್ಟಿಗರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ವೀಡಿಯೋದಲ್ಲಿ, ರೊಟ್ಟಿ ತಯಾರಿಸುವಾಗ ಆ ವ್ಯಕ್ತಿ ಹಿಟ್ಟಿನ ಮೇಲೆ ಉಗುಳುವ ದೃಶ್ಯವಿದೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಕುವೈತ್‌ನ ಫ್ಲ್ಯಾಟ್‌ನಲ್ಲಿ ಬೆಂಕಿ – ಕೇರಳ ಮೂಲದ ದಂಪತಿ, ಇಬ್ಬರು ಮಕ್ಕಳು ದುರ್ಮರಣ
थूक लगाई रोटी “सोनू सूद” को “पार्सल” की जाये, ताकि भाईचारा बना रहे ! https://t.co/e3mghsFgkG pic.twitter.com/ANcE6yquTJ
— Sudhir Mishra ???????? (@Sudhir_mish) July 19, 2024
ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಇರುವ ಅಂಗಡಿಗಳ ಮಾಲೀಕರು ತಮ್ಮ ಹೆಸರಿನ ಬೋರ್ಡ್‌ಗಳನ್ನು ಪ್ರದರ್ಶಿಸಬೇಕು ಎಂಬ ಪೊಲೀಸರ ಆದೇಶಕ್ಕೆ ಸೋನು ಸೂದ್ ಖಾರವಾಗಿ ಪ್ರತಿಕ್ರಿಯಿಸಿದ್ದರು. ಈ ಹೇಳಿಕೆಗೆ ಟಾಂಗ್ ಕೊಡಲು ಕೆಲವರು ಮುಸ್ಲಿಂ ವ್ಯಾಪಾರಿಗೆ ಸಂಬಂಧಿಸಿದ ವೀಡಿಯೋವನ್ನು ನೆಟ್ಟಿಗರು ಹರಿಬಿಟ್ಟಿದ್ದರು. ‘ಹಿಟ್ಟಿನ ಮೇಲೆ ಉಗುಳಿ ತಯಾರಿಸುವ ರೊಟ್ಟಿಯನ್ನು ಸೋನು ಸೂದ್ ಅವರಿಗೆ ಪಾರ್ಸೆಲ್ ಕಳುಹಿಸಬೇಕು. ಆದ್ದರಿಂದ ಸಹೋದರತ್ವವು ಹಾಗೆಯೇ ಉಳಿಯುತ್ತದೆ’ ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದರು.
ಇದಕ್ಕೆ ಪತ್ಯುತ್ತರ ನೀಡಿರುವ ಸೋನು ಸೂದ್, ನಮ್ಮ ಶ್ರೀರಾಮ ಅವರು ಶಬರಿಯ ಎಂಜಲು ಹಣ್ಣುಗಳನ್ನು ತಿಂದಿದ್ದಾರೆ. ಹಾಗಾದರೆ ನಾನು ರೊಟ್ಟಿಗಳನ್ನು ಏಕೆ ತಿನ್ನಬಾರದು? ಅಹಿಂಸೆಯಿಂದ ಹಿಂಸೆಯನ್ನು ಸೋಲಿಸಬಹುದು ನನ್ನ ಸಹೋದರ. ಮಾನವೀಯತೆ ಹಾಗೇ ಉಳಿಯಬೇಕು. ಜೈ ಶ್ರೀ ರಾಮ್ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಮಿಳುನಾಡು ಸರ್ಕಾರಿ ಬಸ್‌ಗೆ ಯುವಕನಿಂದ ಕಲ್ಲೇಟು
हमारे श्री राम जी ने शबरी के झूठे बेर खाए थे तो मैं क्यों नहीं खा सकता
हिंसा को अहिंसा से पराजित किया जा सकता है मेरे भाई????
बस मानवता बरकरार रहनी चाहिए ।
जय श्री राम???? https://t.co/uljActwMrR
— sonu sood (@SonuSood) July 20, 2024
ಸೋನು ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ‘ಸೋನು, ಮೌಢ್ಯವು ಅದರ ಸ್ಥಾನದಲ್ಲಿದೆ. ಸತ್ಯ ಕೂಡ ಅದರ ಸ್ಥಾನದಲ್ಲಿದೆ. ಈ ರೊಟ್ಟಿಯನ್ನು ಮಾಡುವವರು ತಾಯಿ ಶಬರಿಯೂ ಅಲ್ಲ ಅಥವಾ ನೀವು ರಾಮನೂ ಅಲ್ಲ. ತಾಯಿ ಶಬರಿ ಪ್ರೀತಿಯ ಸಂಕೇತ, ಈ ವ್ಯಕ್ತಿಯು ದ್ವೇಷದಿಂದ ಉಗುಳುತ್ತಾನೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಯಿ ಶಬರಿಯು ಭಗವಾನ್ ರಾಮನ ಭಕ್ತೆ ಮತ್ತು ಅವಳು ದುರುದ್ದೇಶದಿಂದ ಹಣ್ಣುಗಳನ್ನು ಅಶುದ್ಧಗೊಳಿಸಲಿಲ್ಲ. ಅವಳ ಮುಗ್ಧತೆಯಲ್ಲಿ ಅವು ಸಿಹಿಯಾಗಿವೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಲು ಅವಳು ಅವುಗಳನ್ನು ಶ್ರೀರಾಮನಿಗೆ ಸರಳವಾಗಿ ನೀಡುತ್ತಿದ್ದಳು. ವೀಡಿಯೊದಲ್ಲಿ ತೋರಿಸಿರುವ ವ್ಯಕ್ತಿಯು ತನ್ನ ಗ್ರಾಹಕರನ್ನು ಪ್ರೀತಿಸುವುದಿಲ್ಲ. ಇತರ ಧರ್ಮಗಳ ಮೇಲಿನ ದ್ವೇಷವೇ ಅವರ ಈ ಕೃತ್ಯದ ಹಿಂದಿನ ಕಾರಣ. ಅಂತಹ ವ್ಯಕ್ತಿಯ ಕೃತ್ಯವನ್ನು ತಾಯಿ ಶಬರಿಯ ಕೃತ್ಯಕ್ಕೆ ಹೋಲಿಸುತ್ತಿದ್ದೀರಾ ಎಂದು ನಟನ ವಿರುದ್ಧ ಮತ್ತೊಬ್ಬ ವ್ಯಕ್ತಿ ಗರಂ ಆಗಿದ್ದಾನೆ.