ಚಂಡೀಗಡ (Chandigarh) ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿಲಯದಲ್ಲಿ ನಡೆದಿದೆ ಎನ್ನಲಾದ ತಲೆತಗ್ಗಿಸುವ ಕೆಲಸ, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ವಿಶ್ವ ವಿದ್ಯಾಲಯದ ಆವರಣದಲ್ಲಿ ಈ ಘಟನೆಯ ಕುರಿತು ಪ್ರತಿಭಟಿಸಲಾಗುತ್ತಿದ್ದು, ತಪ್ಪತಸ್ಥರನ್ನು ಕೂಡಲೇ ಬಂಧಿಸಿ, ಉಗ್ರ ಶಿಕ್ಷೆ ನೀಡುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ಇನ್ನೂ 60 ಹುಡುಗಿಯರು ಈ ಸಂಕಷ್ಟಕ್ಕೆ ಸಿಲುಕೊಳ್ಳಲಿದ್ದಾರೆ ಎನ್ನುವುದು ಮತ್ತಷ್ಟು ಆತಂಕ್ಕೆ ಕಾರಣವಾಗಿದೆ.
ಚಂಡೀಗಡ ವಿವಿಯ (University) ಹಾಸ್ಟೇಲ್ ನಲ್ಲಿ ಹುಡುಗಿಯೊಬ್ಬಳು, ಬಾತ್ ರೂಮ್ ಗೆ ಹೋಗುವ ಹುಡುಗಿಯರ ಖಾಸಗಿ ವಿಡಿಯೋಗಳನ್ನು (Private Video) ಚಿತ್ರಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಅಲ್ಲದೇ, 60ಕ್ಕೂ ಹೆಚ್ಚು ಇಂತಹ ವಿಡಿಯೋಗಳು ಇನ್ನೂ ಇವೆ ಎಂದು ಹೇಳಿದ್ದಾಳೆ ಎನ್ನಲಾಗುತ್ತಿದೆ. ಹಾಗಾಗಿ, ಯಾರದೆಲ್ಲ ವಿಡಿಯೋ ಆಚೆ ಬಂದು, ಇನ್ನೇನು ಆವಾಂತರ ಸೃಷ್ಟಿ ಆಗತ್ತೋ ಅನ್ನುವ ಆತಂಕ ವಿವಿ ಆವರಣದಲ್ಲಿರುವ ಹುಡುಗಿಯರದ್ದು. ಇದನ್ನೂ ಓದಿ:ಟಿವಿ ಬಿಗ್ ಬಾಸ್‌ಗೆ ಈ ಕಿರುತೆರೆ ನಟಿ ಬರೋದು ಪಕ್ಕಾ
ಈ ವಿಷಯ ತಿಳಿಯುತ್ತಿದ್ದಂತೆಯೇ ನಟ ಸೋನು ಸೋದ್ (Sonu Sodh), ನೊಂದವರ ಬೆನ್ನಿಗೆ ನಿಂತಿದ್ದಾರೆ. ಅಲ್ಲದೇ, ಇಂತಹ ಯಾವುದೇ ವಿಡಿಯೋಗಳನ್ನು ನೋಡಬೇಡಿ ಮತ್ತು ಇತರರಿಗೆ ಕಳುಹಿಸಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ, ಈ ಕೃತ್ಯವನ್ನು ಖಂಡಿಸಿದ್ದಾರೆ. ಹೀನ ಮನಸ್ಥಿತಿಯವರನ್ನು ಸುಮ್ಮನೆ ಬಿಡಬೇಡಿ ಎಂದು ಮನವಿ ಮಾಡಿರುವ ಅವರು, ಹೆಣ್ಣು ಮಕ್ಕಳಿಗೆ ಗೌರವವನ್ನು ಕೊಡಿ ಎಂದು ವಿಶೇಷವಾಗಿ ಮನವಿ ಮಾಡಿದ್ದಾರೆ.