ಬಿಗ್ ಬಾಸ್ (Bigg Boss Kannada 10) ಮನೆಯಲ್ಲಿ ಇದ್ದಾಗ ಸ್ನೇಹಿತ್ (Snehith Gowda) ಮತ್ತು ನಮ್ರತಾ (Namratha Gowda) ಆತ್ಮೀಯರಾಗಿದ್ದರು. ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆದಿತ್ತು. ಸಾಕಷ್ಟು ಬಾರಿ ನಮ್ರತಾಗೆ ಸ್ನೇಹಿತ್ ಗೌಡ ಪ್ರೇಮ ನಿವೇದನೆ ಮಾಡಿದ್ದರು. ಆದರೆ ಎಂದಿಗೂ ಸ್ನೇಹಿತ್ ಪ್ರಪೋಸಲ್‌ಗೆ ನಮ್ರತಾ ಒಪ್ಪಿಗೆ ನೀಡಿರಲಿಲ್ಲ. ಇದೀಗ ಕಾರ್ತಿಕ್ ಜೊತೆ ಒಡನಾಟ ಹೊಂದಿರೋ ನಮ್ರತಾ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ. ಸ್ನೇಹಿತ್‌ಗೆ ನಮ್ರತಾ ಕೈ ಕೊಟ್ಟು ಕಾರ್ತಿಕ್ (Karthik Mahesh) ಜೊತೆ ಸ್ನೇಹ ಬೆಳೆಸಿದ್ದಾರೆ ಎಂದೇ ಸುದ್ದಿಯಾಗುತ್ತಿದೆ. ಸ್ನೇಹಿತ್ ಇದೀಗ ನಮ್ರತಾ ಪರವಾಗಿ ಮನವಿವೊಂದನ್ನ ಮಾಡಿದ್ದಾರೆ.
ದೊಡ್ಮನೆಯಲ್ಲಿ ಲವ್ ಬರ್ಡ್ಸ್ ಆಗಿದ್ದ ಸ್ನೇಹಿತ್- ನಮ್ರತಾ ಜೋಡಿ ಅಭಿಮಾನಿಗಳ ಫೇವರೇಟ್ ಆಗಿದ್ದರು. ಸ್ನೇಹಿತ್ ಎಲಿಮಿನೇಷನ್ ಆದಾಗ ನಮ್ರತಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಸ್ನೇಹಿತ್‌ನ ಮಿಸ್ ಮಾಡಿಕೊಳ್ತಿದ್ದೀನಿ ಅಂತ ಅವರ ಕಪ್ ಮತ್ತು ಫೋಟೋವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಇಷ್ಟೇಲ್ಲಾ ಮಾಡಿರೋ ನಮ್ರತಾ, ಸ್ನೇಹಿತ್ ಲವ್ ಇದೆ ಅಂತಲೇ ಫ್ಯಾನ್ಸ್ ಭಾವಿಸಿದ್ದರು. ಈಗ ಕಾರ್ತಿಕ್ ಜೊತೆ ಹೊಸ ಲವ್ ಸ್ಟೋರಿ ಶುರು ಆಗಿರೋ ಕಾರಣ, ಸ್ನೇಹಿತ್‌ಗೆ ನಮ್ರತಾ ಕೈ ಕೊಟ್ಟಿದ್ದಾರೆ ಅಂತಲೇ ಟ್ರೋಲ್ ಆಗ್ತಿದ್ದಾರೆ. ಅದಕ್ಕಾಗಿ ಸ್ನೇಹಿತ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಕ್ಲ್ಯಾರಿಟಿ ಕೊಟ್ಟಿದ್ದಾರೆ.
View this post on Instagram
ನಮ್ರತಾ ನನಗೆ ಮೋಸ ಮಾಡಿದರು ಎಂಬ ಮಾತುಗಳು ಹೇಳುವುದನ್ನು ದಯವಿಟ್ಟು ನಿಲ್ಲಿಸಿ. ನಮ್ರತಾ ಎಂದಿಗೂ ನಿಮ್ಮ ಮೇಲೆ ನನಗೆ ಪ್ರೀತಿ ಎಂದು ನನಗೆ ಹೇಳಿರಲಿಲ್ಲ. ಅವರ ಮೇಲಿರೋ ನನ್ನ ಪ್ರೀತಿ ಒನ್ ಸೈಡೆಡ್ ಅಷ್ಟೆ. ನೀವೇನು ಈಗ ನಮ್ರತಾ ಬಗ್ಗೆ ಟ್ರೋಲ್, ಮೀಮ್‌ಗಳನ್ನು ಮಾಡುತ್ತಿದ್ದೀರೋ ಇದರಿಂದ ಅವರ ಕುಟುಂಬದವರಿಗೆ ಮಾತ್ರವಲ್ಲದೆ ನನಗೂ ಬೇಸರ ತರಿಸಿದೆ. ಈ ಮೀಮ್‌ಗಳನ್ನು, ಟ್ರೋಲ್‌ಗಳಿಂದ ಒಬ್ಬರ ವ್ಯಕ್ತಿತ್ವಕ್ಕೆ ಧಕ್ಕೆ ಆಗುತ್ತಿದೆ ಅದು ಆಗಬಾರದು ಎಂದು ಸ್ನೇಹಿತ್ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಆಶಿಕಾಗೆ ಮನೆ ಊಟ ಕಳುಹಿಸುತ್ತಿದ್ದ ನಾಗಾರ್ಜುನ- ನಟಿ ಭಾವುಕ
ನನ್ನ- ನಮ್ರತಾ ನಡುವೆ ಏನೇ ನಡೆದಿದ್ದರೂ, ಆ ಮನೆಯಲ್ಲಿ ನಮ್ರತಾ ನನ್ನ ಮೊದಲ ಗೆಳತಿ. ನಮ್ರತಾ ನನಗೆ ಸದಾ ಬೆಂಬಲ, ಸಹಾಯ ಮಾಡಿದ್ದಾರೆ. ಹಸಿದಾಗ ಊಟ ಕೊಟ್ಟಿದ್ದಾರೆ, ಪ್ರೊಟೀನ್ ಕೊಟ್ಟಿದ್ದಾರೆ. ಅದೆಲ್ಲ ಏನೂ ಬದಲಾಗುವುದಿಲ್ಲ. ನನ್ನ, ವಿನಯ್- ನಮ್ರತಾ ಮಧ್ಯೆ ಇದ್ದಿದ್ದ ಗೆಳೆತನ ಅವರು ಮನೆಯಿಂದ ಹೊರಗೆ ಬಂದ ಬಳಿಕವೂ ಮುಂದುವರೆಯಲಿದೆ. ಆದರೆ ಈಗ ನಮ್ರತಾ ವ್ಯಕ್ತಿತ್ವದ ಬಗ್ಗೆ ಮಾಡುತ್ತಿರುವ ಟ್ರೋಲ್, ಮೀಮ್‌ಗಳನ್ನು ನಿಲ್ಲಿಸಿ, ಇದು ನನ್ನ ಕಡೆಯಿಂದ ಎಲ್ಲರಿಗೂ ಮನವಿ ಎಂದು ಸ್ನೇಹಿತ್ ಕೇಳಿಕೊಂಡಿದ್ದಾರೆ.