‘ಪ್ರೇಮಂ’ ನಟಿ ಸಾಯಿ ಪಲ್ಲವಿ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶಿವಕಾರ್ತಿಕೇಯನ್ (Sivakarthikeyan) ಜೊತೆ ಸಾಯಿ ಪಲ್ಲವಿ ನಟಿಸಿರುವ ‘ಅಮರನ್’ (Amaran Film) ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಸಿನಿಮಾ ರಿಲೀಸ್‌ಗೆ ಸಿದ್ಧತೆ ಕೂಡ ನಡೆಯುತ್ತಿದೆ. ಇದನ್ನೂ ಓದಿ:ಟ್ರೋಲ್‌ಗಳ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ನೇಹಾ ಶೆಟ್ಟಿ
‘ಅಮರನ್’ ಮೇಜರ್ ಮುಕುಂದ ವರದರಾಜನ್ ಜೀವನ ಚರಿತ್ರೆಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. ಯೋಧನಾಗಿ ಲೀಡ್ ರೋಲ್‌ನಲ್ಲಿ ಶಿವಕಾರ್ತಿಕೇಯನ್ ನಟಿಸಿದ್ದು, ನಾಯಕಿಯಾಗಿ ಸಾಯಿ ಪಲ್ಲವಿ (Sai Pallavi) ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಖ್ಯಾತ ನಟ ಕಮಲ್ ಹಾಸನ್ (Kamal Haasan), ಆರ್. ಮಹೇಂದ್ರನ್, ವಿವೇಕ್ ಸೇರಿ ನಿರ್ಮಾಣ ಮಾಡಿದ್ದಾರೆ.
ರಾಜಕುಮಾರ್ ಪೆರಿಸ್ವಾಮಿ ನಿರ್ದೇಶನದ ಈ ಚಿತ್ರದ ಶೂಟಿಂಗ್ ಈಗ ಪೂರ್ಣಗೊಂಡಿದ್ದು, ಸದ್ಯದಲ್ಲೇ ಸಿನಿಮಾದ ರಿಲೀಸ್ ಡೇಟ್ ಕೂಡ ಘೋಷಿಸಲಿದ್ದಾರೆ. ಇನ್ನೂ ಸಾಯಿ ಪಲ್ಲವಿ ಮತ್ತು ಶಿವಕಾರ್ತಿಕೇಯನ್ ಜೋಡಿಯನ್ನು ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
ಅಂದಹಾಗೆ, ರಾಮಾಯಣ, ತಾಂಡೇಲ್, ಆಮೀರ್ ಖಾನ್ ಪುತ್ರನ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಸಾಯಿ ಪಲ್ಲವಿ ಕೈಯಲ್ಲಿವೆ. ಬಾಲಿವುಡ್‌ನಲ್ಲಿ ಕೂಡ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.