ಕಾಲಿವುಡ್ ನಟ ಸಿದ್ಧಾರ್ಥ್- ಅದಿತಿ ರಾವ್ ಹೈದರಿ (Aditi Rao Hidari) ಸಾಕಷ್ಟು ಸಮಯದಿಂದ ಡೇಟಿಂಗ್ ಮಾಡ್ತಿದ್ದಾರೆ. ಆದರೆ ಎಲ್ಲೂ ಕೂಡ ತಮ್ಮ ಪ್ರೀತಿ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಈಗ ಅದಿತಿ ಅವರನ್ನ ತಮ್ಮ ಪಾರ್ಟ್‌ನರ್ ಎಂದು ಒಪ್ಪಿಕೊಂಡಿದ್ದಾರೆ. ಅದಷ್ಟೇ ಅಲ್ಲ, ಅದಿತಿ ಫೋಟೋ ಶೇರ್ ಮಾಡಿ ವಿಶೇಷ ಸಾಲುಗಳನ್ನ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಪೊಲೀಸ್ ಕಸ್ಟಡಿಯಲ್ಲಿ ದೈವ ನರ್ತಕರು: ಕೊರಗಜ್ಜ ಡೈರೆಕ್ಟರ್ ಹೇಳಿದ್ದೇನು?
ಅ.28ರಂದು ಅದಿತಿ ರಾವ್ ಹುಟ್ಟುಹಬ್ಬವಾಗಿದ್ದು, ಸಿದ್ಧಾರ್ಥ್ (Actor Siddarth) ವಿಶೇಷವಾಗಿ ಶುಭಕೋರಿದ್ದಾರೆ. ಈ ವೇಳೆ, ಪಾರ್ಟ್‌ನರ್ ಎಂದು ನಟ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಸಿದ್ಧಾರ್ಥ್ ಪೋಸ್ಟ್‌ಗೆ ಅದಿತಿ ಕೂಡ ಪ್ರತಿಕ್ರಿಯೆ ನೀಡಿ, ಧನ್ಯವಾದ ತಿಳಿಸಿದ್ದಾರೆ. ಸಿದ್ಧಾರ್ಥ್ ಶೇರ್ ಮಾಡಿರುವ ಪೋಸ್ಟ್‌ಗೆ ಅದಿತಿ ಪ್ರತಿಕ್ರಿಯೆ ನೀಡಿರೋದನ್ನ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅದಷ್ಟು ಬೇಗ ಮದುವೆಯಾಗಿ ಎಂದು ಹಾರೈಸಿದ್ದಾರೆ.
View this post on Instagram
ಸೆಲೆಬ್ರಿಟಿಗಳ ಸಾಕಷ್ಟು ಡಿನ್ನರ್ ಪಾರ್ಟಿಗಳಲ್ಲಿ ಸಿದ್ಧಾರ್ಥ್- ಅದಿತಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಶರ್ವಾನಂದ್ ಆರತಕ್ಷತೆಯಲ್ಲೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರ ಲವ್ ಬಗ್ಗೆ ಆಗಲೇ ಗುಮಾನಿ ಇತ್ತು.
ಅದಿತಿ ಅವರು ಈ ಹಿಂದೆ ಸತ್ಯದೀಪ್ ಮಿಶ್ರಾ ಜೊತೆ ಮದುವೆಯಾಗಿದ್ರು. ಬಳಿಕ 2013ರಲ್ಲಿ ಡಿವೋರ್ಸ್ ಪಡೆದರು. ಸಿದ್ಧಾರ್ಥ್ ಕೂಡ 2003ರಲ್ಲಿ ಮೇಘನಾ ಎಂಬುವವರನ್ನ ಮದುವೆಯಾಗಿದ್ದರು. 2007ರಲ್ಲಿ ಸಿದ್ಧಾರ್ಥ್-ಮೇಘನಾ ಡಿವೋರ್ಸ್ ಪಡೆದರು. ಈಗ ಅದಿತಿ-ಸಿದ್ಧಾರ್ಥ್ ಎಂಗೇಜ್ ಆಗಿದ್ದಾರೆ. ಸದ್ಯದಲ್ಲೇ ಮದುವೆ ಬಗ್ಗೆ ಸಿಹಿಸುದ್ದಿ ಕೊಡುತ್ತಾರಾ? ಕಾದುನೋಡಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]