‘ಅನಿಮಲ್’ (Animal) ಸಿನಿಮಾದ ಹಾಟ್ ಬೆಡಗಿ ತೃಪ್ತಿ ದಿಮ್ರಿ ‘ಪುಷ್ಪ 2’ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕ್ತಾರೆ ಎಂಬ ಸುದ್ದಿ ವೈರಲ್ ಆದ ಬೆನ್ನಲ್ಲೇ ಇದೀಗ ಬಿಟೌನ್‌ನಲ್ಲಿ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಸಿದ್ಧಾಂತ್ ಚತುರ್ವೇದಿ (Siddhant Chaturvedi) ಜೊತೆ ಡ್ಯುಯೇಟ್ ಹಾಡೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ತಮಿಳು ನಟ ಸಿಂಬುಗೆ ಜಾನ್ವಿ ಕಪೂರ್ ನಾಯಕಿ
ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಕರಣ್ ಜೋಹರ್ ‘ಧಡಕ್ 2’ (Dhadak 2) ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿದ್ಧಾಂತ್ ಮತ್ತು ತೃಪ್ತಿ ಈ ಹೊಸ ಜೋಡಿಯನ್ನು ಜೊತೆಯಾಗಿಸಿ ವಿಭಿನ್ನ ಪ್ರೇಮ ಕಥೆಯನ್ನು ತೋರಿಸಲು ಹೊರಟಿದ್ದಾರೆ. ತಂಡದ ಕಡೆಯಿಂದ ಅಫಿಷಿಯಲ್ ಅನೌನ್ಸ್‌ಮೆಂಟ್ ಕೂಡ ಆಗಿದೆ.
View this post on Instagram
‘ಅನಿಮಲ್’ ಸಿನಿಮಾದಲ್ಲಿ ರಣ್‌ಬೀರ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡ ಮೇಲೆ ತೃಪ್ತಿಗೆ ಅದೃಷ್ಟ ಖುಲಾಯಿಸಿದೆ. ಧಡಕ್ 2ಗೆ ಚಾನ್ಸ್ ಸಿಕ್ಕಿದೆ. ಸಿದ್ಧಾಂತ್ ಕಾಣಿಸಿಕೊಳ್ತಿರುವ ತೃಪ್ತಿಗೆ ಉತ್ತಮ ಪಾತ್ರವೇ ಸಿಕ್ಕಿದೆ. ನಾಯಕಿ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದ್ದು, ಜನರಿಗೂ ಈ ಸಿನಿಮಾ ಕನೆಕ್ಟ್ ಆಗಲಿದೆಯಂತೆ.
2018ರಲ್ಲಿ ‘ಧಡಕ್’ ಸಿನಿಮಾದಲ್ಲಿ ಇಶಾನ್‌ಗೆ ನಾಯಕಿಯಾಗಿ ಜಾನ್ವಿ ಕಪೂರ್ ನಟಿಸಿದ್ದರು. ಜಾನ್ವಿ ಚೊಚ್ಚಲ ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು.