ಬಾಲಿವುಡ್‌ನ (Bollywood) ಪ್ರೇಮ ಪಕ್ಷಿಗಳಾಗಿದ್ದ ಸಿದ್ಧಾರ್ಥ್-ಕಿಯಾರಾ (Kiara Advani) ಜೋಡಿ ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿನಿಮಾ ಮತ್ತು ವೈವಾಹಿಕ ಜೀವನದಲ್ಲಿ ಬ್ಯುಸಿಯಿರುವ ಈ ಜೋಡಿ ಇದೀಗ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ.
Advertisement
‘ಶೇರ್‌ಷಾ’ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟು 2 ತಿಂಗಳಾಗಿದೆ. 2 ವರ್ಷಗಳ ಡೇಟಿಂಗ್ ನಂತರ ಫೆ.7ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದ ಸಿದ್- ಕಿಯಾರಾ ಇದೀಗ ಖುಷಿ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಪ್ರೀತಿ- ಮದುವೆ ಬಗ್ಗೆ ಎಲ್ಲೂ ಸುಳಿವು ನೀಡದೇ ಸಿಹಿಸುದ್ದಿ ನೀಡಿದ್ದರು. ಇದನ್ನೂ ಓದಿ:`ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆಲಿಯಾ ಭಟ್- ರಶ್ಮಿಕಾ ಮಂದಣ್ಣ
Advertisement
View this post on Instagram
Advertisement
ಇದೀಗ ನೀತಾ ಮುಖೇಶ್ ಅಂಬಾನಿ ಆಯೋಜಿಸಿದ ಸಮಾರಂಭದಲ್ಲಿ ಶೇರ್‌ಷಾ ಕಪಲ್ ಮಸ್ತ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅದಕ್ಕೂ ಮುನ್ನ ಚೆಂದದ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಸಿದ್-ಕಿಯಾರಾ ಗೋಲ್ಡನ್ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಇಬ್ಬರ ನಯಾ ಫೋಟೋಶೂಟ್ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
Advertisement
View this post on Instagram
`ಶೇರ್‌ಷಾ’ ನಂತರ ಕರಣ್ ಜೋಹರ್ ನಿರ್ಮಾಣದ ಬ್ಯಾಕ್ ಟು ಬ್ಯಾಕ್ 3 ಚಿತ್ರಗಳಲ್ಲಿ ಸಿದ್-ಕಿಯಾರಾ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಗುವವರೆಗೂ ಕಾದುನೋಡಬೇಕಿದೆ.