ಇದೀಗ ಭಾರತದಾದ್ಯಂತ ಮಿ ಟೂ ಎಂಬ ಅಭಿಯಾನದ ಮೂಲಕ ಚಿತ್ರರಂಗದ ಅತಿರಥ ಮಹಾರಥರ ಮಾನ ಹರಾಜಾಗುತ್ತಿದೆ. ಹೇಳಿ ಕೇಳಿ ಸಿನಿಮಾ ಜಗತ್ತೆಂದರೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಇಂಥ ಲಕಲಕಿಸೋ ಲೋಕದಲ್ಲಿ ಹೆಣ್ಣುಗಳನ್ನು ಕಾಡಿಸಿ ವಿಕೃತಾನಂದ ಪಡೆಯಲೆಂದೇ ಅನೇಕರು ಹೊಂಚು ಹಾಕಿ ಕೂತಿದ್ದಾರೆ. ಇಂಥವರನ್ನೆಲ್ಲ ನಾನಾ ಮುಲಾಜಿನಿಂದ ಸಹಿಸಿಕೊಂಡಿದ್ದ ನಟಿಯರು, ಗಾಯಕಿಯರು ಸೇರಿದಂತೆ ಬೇರೆ ಬೇರೆ ವಿಭಾಗಗಳವರು ಹಲವರನ್ನು ಬೆತ್ತಲು ಮಾಡುತ್ತಿದ್ದಾರೆ. ಇದೀಗ ಈ ಅಭಿಯಾನದ ಬಗ್ಗೆ ನಟಿ ಶ್ರುತಿ ಹರಿಹರನ್ ಮನ ಬಿಚ್ಚಿ ಮಾತಾಡಿದ್ದಾರೆ!
Advertisement
ಹುಬ್ಬಳ್ಳಿಯಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಶ್ರುತಿ ಹರಿಹರನ್ ಮಾಧ್ಯಮದ ಮಂದಿ ಕೇಳಿದಾಗ ಮಿ ಟೂ ಅಭಿಯಾನದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಿ ಟೂ ಎಂಬುದೊಂದು ಗೇಮ್ ಚೇಂಜರ್ ಅಂತ ಅಭಿಪ್ರಾಯ ಪಟ್ಟಿದ್ದಾರೆ. ಈ ಅಭಿಯಾನದ ಮೂಲಕವಾದರೂ ಚಿತ್ರರಂಗವೂ ಸೇರಿದಂತೆ ವಿವಿಧ ವಲಯಗಳ ಮಹಿಳೆಯರು ತಮ್ಮ ಮೇಲಾಗಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುತ್ತಿರೋದು ಸಕಾರಾತ್ಮಕ ಬೆಳವಣಿಗೆ. ಈ ಮೂಲಕ ಕೆಲವರ ಮತ್ತೊಂದು ಮುಖ ಅನಾವರಣವಾಗುತ್ತಿದೆ. ಇಂಥವರಲ್ಲಿ ಎಲ್ಲರಿಗೂ ಶಿಕ್ಷೆಯಾಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಎಲ್ಲರಿಗೂ ಆಗುವಂತಾಗಲಿ ಎಂಬುದು ಆಶಯ ಅಂದಿದ್ದಾರೆ.
Advertisement
Advertisement
ಅಧಿಕಾರ ಮತ್ತು ಹಣ ಬಲದಿಂದಲೇ ಇಂಥಾ ಲೈಂಗಿಕ ದೌರ್ಜನ್ಯಗಳು ನಡೆದುಕೊಂಡು ಬಂದಿದ್ದವು. ಆದರೆ ಇನ್ನು ಮುಂದೆ ಮಹಿಳೆಯರನ್ನು ಭೋಗದ ವಸ್ತುವಂತೆ ಕಾಣುವ ಮಂದಿ ಮಾಧ್ಯಮಗಳ ಮೂಲಕ ಮಾನ ಹರಾಜಾಗೋದರಿಂದ ಹಿಂಜರಿದಾದರೂ ಮಹಿಳೆಯರನ್ನು ನೆಮ್ಮದಿಯಾಗಿರುವಂತೆ ಮಾಡುವಂತಾಗಲಿ ಅಂತ ಶ್ರುತಿ ಹರಿಹರನ್ ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv