‘ಆರ್.ಸಿ.ಬಿ’ಗಾಗಿ ಲಾಂಗ್ ಹಿಡಿದ ನಟ ಶಿವರಾಜ್ ಕುಮಾರ್

Public TV
2 Min Read
Shivaraj Kumar 1

ರಾಯಲ್ ಚಾಲೇಂಜರ್ಸ್ ಬೆಂಗಳೂರು ಸಿನಿಮಾ ರಂಗದ ಜೊತೆಗೂಡಿ ಪ್ರೊಮೋಗಳನ್ನು ರಿಲೀಸ್ ಮಾಡುತ್ತಿದೆ. ಅನ್ ಬಾಕ್ಸ್ ಹೆಸರಿನ ಇವೆಂಟ್ ವೊಂದನ್ನು ಆಯೋಜನೆ ಮಾಡಲಾಗಿದ್ದು, ಈ ಇವೆಂಟ್ ನಲ್ಲಿ ಹೆಸರು ಬದಲಾವಣೆ ಆಗಲಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಈ ಇವೆಂಟ್ ಗಾಗಿಯೇ ಈವರೆಗೂ ಮೂರು ಪ್ರೊಮೊಗಳನ್ನು ಬಿಡಲಾಗಿದೆ. ಇಂದು ಶಿವರಾಜ್ ಕುಮಾರ್ (Shivaraj Kumar) ಇರುವ ಪ್ರೊಮೋ ರಿಲೀಸ್ ಆಗಿದ್ದು, ಶಿವಣ್ಣ ಸಖತ್ತಾಗಿ ಲಾಂಗ್ ಎತ್ತಿದ್ದಾರೆ.

Shivaraj Kumar 2

ಈ ಹಿಂದೆ ರಿಲೀಸ್ ಆಗಿರುವ ಪ್ರೊಮೋಗಳು ಕೂಡ ಸಖತ್ ಕ್ರೇಜ್ ಕ್ರಿಯೇಟ್ ಮಾಡುತ್ತಿವೆ. ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಈ ಇವೆಂಟ್ ನಡೆಯುತ್ತಿದ್ದು, ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಅವರ ಪ್ರೊಮೋ ಮೊನ್ನೆ ರಿಲೀಸ್ ಆಗಿದೆ. ಅದು ಹೆಸರನ್ನು ಬದಲಿಸುವ ಕುರಿತು ಒಂದಷ್ಟು ಮಾಹಿತಿಯನ್ನು ನೀಡುತ್ತದೆ.

Shivaraj Kumar 3

ಈ ಹಿಂದೆ ಆರ್‌ಸಿಬಿ (RCB) ಕೋಣಗಳ ಜೊತೆ ‘ಕಾಂತಾರ’ (Kantara) ಶಿವ ಎಂಟ್ರಿ ಕೊಟ್ಟಿದ್ದ ಪ್ರೊಮೋ ರಿಲೀಸ್ ಆಗಿತ್ತು. ಅದು ಕೂಡ ಆರ್‌ಸಿಬಿ ಹೆಸರು ಬದಲಾವಣೆ ಸಾಧ್ಯತೆ ಬಗ್ಗೆ ಸುಳಿವು ನೀಡಿತ್ತು. ಆರ್‌ಸಿಬಿ ತಂಡದ ಜೊತೆ ಈ ಬಾರಿ ಕಾಂತಾರ ರಿಷಬ್ ಶೆಟ್ಟಿ (Rishab Shetty) ಕೈಜೋಡಿಸಿದ್ದಾರೆ. ಆರ್‌ಸಿಬಿ ಐಪಿಎಲ್ ಕ್ರಿಕೆಟ್ ತಂಡದ ಜೊತೆ ಹೊಂಬಾಳೆ ಸಂಸ್ಥೆ ಕೂಡ ಸಾಥ್ ನೀಡಿದೆ. ಆರ್‌ಸಿಬಿಗೆ ಡಿಜಿಟಲ್ ಪಾರ್ಟ್ನರ್ ಆಗಿ ಹೊಂಬಾಳೆ ಫಿಲ್ಮ್ ಕೈಜೋಡಿಸಿದ್ದಾರೆ.

Ashwini Puneeth Rajkumar 1

ಮಾರ್ಚ್ 22ರಿಂದ 17ನೇ ಐಪಿಎಲ್ ಸೀಸನ್ ಆರಂಭವಾಗಲಿದೆ. ಈ ಬಾರಿ ಆದರೂ ಆರ್‌ಸಿಬಿ ತಂಡ ಕಪ್ ಎತ್ತಿ ಹಿಡಿಯುತ್ತಾ ಎಂದು ಕ್ರಿಕೆಟ್ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಮತ್ತೊಂದು ಕಡೆ ಹೊಂಬಾಳೆ ಫಿಲ್ಮ್ಸ್ ಆರ್‌ಸಿಬಿ ಬಗ್ಗೆ ಹೊಸ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಿದೆ. ಆರ್‌ಸಿಬಿ ಅಭಿಮಾನಿಗಳ ಬಹಳ ದಿನಗಳ ಬೇಡಿಕೆಯನ್ನು ಆರ್‌ಸಿಬಿ ತಂಡದ ಮಾಲೀಕರು ಈ ಬಾರಿ ಈಡೇರಿಸುತ್ತಿದ್ದಾರೆ. ಆ ಬಗ್ಗೆ ರಿಷಬ್ ಸುಳಿವು ಕೊಟ್ಟಿದ್ದಾರೆ.

rishab shetty 3

ರಿಷಬ್ ಶೆಟ್ಟಿ ಏನು ಹೇಳ್ತಿದ್ದಾರೆ ಅರ್ಥ ಆಯ್ತಾ? ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ವೀಡಿಯೋ ರಿಲೀಸ್ ಆಗಿದೆ. ಇದರಲ್ಲಿ Bangalore ಎಂದು ಕೋಣದ ಮೇಲೆ ಬರೆದ ಕೋಣವನ್ನು ನೋಡಿ, ಭಟ್ರೆ ತಗೊಂಡೋಗಿ ಎಂದು ರಿಷಬ್‌ ಹೇಳುತ್ತಾರೆ. ಇದು ಅರ್ಥ ಆಯ್ತಾ? ಎಂದು ಕೇಳಿದ್ದಾರೆ. 8 ವರ್ಷಗಳ ಹಿಂದೆ ಬೆಂಗಳೂರು ಎನ್ನುವುದನ್ನು ಇಂಗ್ಲೀಷ್‌ನಲ್ಲಿ ಬರೆಯುವಾಗ ಮತ್ತು ಉಚ್ಛರಿಸುವಾಗ ಸಣ್ಣ ಬದಲಾವಣೆ ಮಾಡಲಾಗಿತ್ತು.

 

Bangalore ಎನ್ನುವುದನ್ನು Bengaluru ಎಂದು ಬದಲಾಯಿಸಿದ್ದರು. ಆರ್‌ಸಿಬಿ ತಂಡದ ಬಗ್ಗೆ ಮಾತನಾಡುವಾಗ ಮಾತ್ರ ಅದು Bangalore ಎಂದೇ ಇತ್ತು. ಅಭಿಮಾನಿಗಳು ಇದನ್ನು ಬದಲಿಸಿ Bengaluru ಎಂದು ಮಾಡಬೇಕು ಎಂದು ಮನವಿ ಮಾಡುತ್ತಿದ್ದರು. ಇದೀಗ ರಿಷಬ್ ಶೆಟ್ಟಿ ಸ್ಪೆಷಲ್ ವಿಡಿಯೋದಲ್ಲಿ ಆ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಮಾರ್ಚ್ 19ರಂದು ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಲಿದೆ. ಆ ದಿನ ಅಧಿಕೃತವಾಗಿ ಇದು ಗೊತ್ತಾಗಲಿದೆ.

Share This Article