ಕನ್ನಡದ ಹೆಸರಾಂತ ನಟ ಶಿವರಾಜ್ ಕುಮಾರ್ ಅವರಿಗೂ ಟ್ರೋಲಿಗರು ಸುಮ್ಮನೆ ಬಿಡುತ್ತಿಲ್ಲ. ಶಿವರಾಜ್ ಕುಮಾರ್ ಯಾವುದೇ ಕಾರ್ಯಕ್ರಮದಲ್ಲಿ ಭಾಗಿ ಆಗಿರಲಿ, ಅಲ್ಲಿನ ವಿಡಿಯೋಗಳನ್ನು ಎತ್ತಿಕೊಂಡು ಟ್ರೋಲ್ ಮಾಡಲಾಗುತ್ತಿದೆ. ಆ ಟ್ರೋಲ್ ಗಳು ಕೂಡ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಹೀಗಾಗಿಯೇ ಶಿವರಾಜ್ ಕುಮಾರ್ ಇನ್ಮುಂದೆ ಹೆಚ್ಚು ಹೊತ್ತು ಮಾತನಾಡಲಾರೆ, ಮಾಧ್ಯಮಗಳ ಕ್ಯಾಮೆರಾ ಮುಂದೆ ಹೆಚ್ಚೆಚ್ಚು ನಿಲ್ಲಲಾರೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರಂತೆ.
ಉಪೇಂದ್ರ ನಿರ್ದೇಶನದ ಹೊಸ ಸಿನಿಮಾದ ಮುಹೂರ್ತದಲ್ಲಿ ಮುಂದೆ ಕುಳಿತಿದ್ದವರಿಗೆ ವಿಚಿತ್ರ ಭಂಗಿಯಲ್ಲಿ ಶಿವರಾಜ್ ಕುಮಾರ್ ತಿವಿದಿದ್ದರು. ಸುಮ್ಮನೆ ಕುಳಿತುಕೊಳ್ಳುವಂತೆ ಆ ರೀತಿಯಲ್ಲಿ ಹೇಳಿದ್ದರು. ಅಲ್ಲದೇ, ತಮ್ಮದೇ ನಟನೆಯ ಸಿನಿಮಾದ ಮುಹೂರ್ತದಲ್ಲಿ ತಮ್ಮ ಪಾಡಿಗೆ ತಾವು ಸುದೀಪ್ ನಟನೆಯ ರಾ ರಾ ರಕ್ಕಮ್ಮ ಹಾಡಿಗೆ ತಮಗರಿವಿಲ್ಲದಂತೆ ಡಾನ್ಸ್ ಮಾಡಿದ್ದರು. ಅದನ್ನೂ ಶೂಟ್ ಮಾಡಿದ್ದ ಕ್ಯಾಮೆರಾಗಳು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದವು. ಆ ವಿಡಿಯೋ ಕೂಡ ಟ್ರೋಲ್ ಆಗುತ್ತಿವೆ. ಇದನ್ನೂ ಓದಿ:ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ ಸುದೀಪ್
ತಮ್ಮ ವಿಡಿಯೋ ತುಣುಕುಗಳು ಟ್ರೋಲ್ ಗೆ ಗುರಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಶಿವರಾಜ್ ಕುಮಾರ್, ಇನ್ಮುಂದೆ ಎಷ್ಟು ಬೇಕೋ ಅಷ್ಟನ್ನೇ ಮಾತನಾಡುತ್ತಾರಂತೆ. ಅಲ್ಲದೇ ಹೆಚ್ಚಿಗೆ ಕ್ಯಾಮೆರಾ ಮುಂದೆ ನಿಲ್ಲುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಇಂಥದ್ದೊಂದು ನಿರ್ಧಾರವು ಶಿವರಾಜ್ ಕುಮಾರ್ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಅವರು ಟ್ರೋಲ್ ಮಾಡುವವರ ವಿರುದ್ಧ ಗರಂ ಆಗಿದ್ದಾರೆ.